9 ಸೇನಾಧಿಕಾರಿಗಳನ್ನ ಸಂಸತ್‌ನಿಂದ ಕಿತ್ತೆಸೆದ ಜಿನ್‌ಪಿಂಗ್‌

masthmagaa.com:

ನೆನ್ನೆ ತಾನೆ ಹೊಸ ರಕ್ಷಣಾ ಸಚಿವರನ್ನ ಅಪಾಯಿಂಟ್‌ ಮಾಡಿದ್ದ ಚೀನಾ ಈಗ ದಿಢೀರ್‌ ಅಂತ 9 ಹಿರಿಯ ಸೇನಾಧಿಕಾರಿಗಳನ್ನ ಸಂಸತ್‌ನಿಂದ ಹೊರ ಹಾಕಿದೆ. ಇದ್ರಲ್ಲಿ 5 ಜನ ಚೀನಾದ ಕ್ಷಿಪಣಿ ವಿಭಾಗ ಹ್ಯಾಂಡಲ್‌ ಮಾಡೋ ಹಾಗು ಅಣ್ವಸ್ತ್ರ ದಳದ ಪ್ರಮುಖ ಭಾಗವಾದ PLA ರಾಕೆಟ್‌ ಫೋರ್ಸ್‌ಗೆ ಸೇರಿದ ಟಾಪ್‌ ಕಮಾಂಡರ್‌ಗಳಿದ್ದಾರೆ. ಆದ್ರೆ ಚೀನಾ ಎಂದಿನಂತೆ ಈ ಹಿರಿಯ ಅಧಿಕಾರಿಗಳನ್ನ ಯಾಕೆ ಹೊರಹಾಕಲಾಯ್ತು, ಇವ್ರೇನು ಮಾಡಿದ್ರು ಅನ್ನೋ ಮಾಹಿತಿಯನ್ನ ಬಾಯ್ಬಿಟ್ಟಿಲ್ಲ. ಅಂದ್ಹಾಗೆ ಚೀನಾದ 3 ಸಾವಿರ ಸದಸ್ಯರ ಸಂಸತ್‌ನಲ್ಲಿ ಅಲ್ಲಿನ ಸೇನೆ PLAನ 268 ಅಧಿಕಾರಿಗಳು ಕೂಡ ಇದ್ದಾರೆ. ಇನ್‌ಫ್ಯಾಕ್ಟ್‌ ಚೀನಾ ಸಂಸತ್ತು ಜನರಿಗಿಂತ ಹೆಚ್ಚು ಅಲ್ಲಿನ ಸೈನಿಕರನ್ನ ರೆಪ್ರೆಸೆಂಟ್‌ ಮಾಡುತ್ತೆ. ಆದ್ರೆ ಇತ್ತೀಚೆಗೆ ಸೇನೆಯ ಭಾಗವಾದ ರಾಕೆಟ್‌ ಫೋರ್ಸ್‌ನಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ಆಂತರಿಕವಾಗಿ ಚೀನಾ ಸೇನೆ ದೊಡ್ಡ ಭ್ರಷ್ಟಾಚಾರ ನಿಗ್ರಹ ಅಭಿಯಾನವನ್ನ ನಡೆಸ್ತಿದೆ. ಹಲವಾರು ಸೇನಾಧಿಕಾರಿಗಳನ್ನ ಕಿತ್ತೆಸೆಯುತ್ತಾ ಬರ್ತಿದೆ. ಇದೇ ವಿಚಾರವಾಗಿ ಚೀನಾದ ಮಾಜಿ ರಕ್ಷಣಾ ಸಚಿವ ಜೆನರಲ್‌ ಲಿ ಶಾಂಗ್‌ಫು ಸಡನ್ನಾಗಿ ಕಾಣೆಯಾಗಿದ್ರು. ಇದುವರೆಗು ಅವ್ರೆಲ್ಲಿದಾರೆ ಅನ್ನೋ ಮಾಹಿತಿ ಇಲ್ಲ. ಅದ್ರ ಬೆನ್ನಲ್ಲೇ ಜಿನ್‌ಪಿಂಗ್‌ ಸರ್ಕಾರ ಈಗ ಮತ್ತೆ 9 ಅಧಿಕಾರಿಗಳನ್ನ ತೆಗೆದು ಹಾಕಿದೆ.

-masthmagaa.com

Contact Us for Advertisement

Leave a Reply