ತಮಿಳುನಾಡಲ್ಲಿ ರಾಮಮಂದಿರದ ಲೈವ್‌ ಟೆಲಿಕಾಸ್ಟ್‌ ಬ್ಯಾನ್‌!

masthmagaa.com:

ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಲೈವ್‌ ಟೆಲಿಕಾಸ್ಟ್‌ ಆಗೋದನ್ನ ತಮಿಳುನಾಡು ಸರ್ಕಾರ ಬ್ಯಾನ್‌ ಮಾಡಿದೆ ಅಂತ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ ಕಿಡಿಕಾರಿದ್ದಾರೆ. ಈ ಬಗ್ಗೆ ವರದಿ ಮಾಡಿರೋ ಪತ್ರಿಕೆಯನ್ನ ಪೋಸ್ಟ್‌ ಮಾಡಿ ತಮಿಳುನಾಡಿನ ಡಿಎಮ್‌ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಪ್ರಾಣ ಪ್ರತಿಷ್ಠಾಪನೆ ವೇಳೆ ತಮಿಳುನಾಡಿನಲ್ಲಿರೋ ಶ್ರೀರಾಮನ ದೇವಾಲಯಗಳಲ್ಲಿ ಪೂಜೆ ಮಾಡೋದನ್ನ ಮತ್ತು ಪ್ರಸಾದ ನೀಡೋದನ್ನೂ ಸರ್ಕಾರ ತಡೆದಿದೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ತಮಿಳುನಾಡಿನ ಸಚಿವ ಪಿಕೆ ಸೇಖರ್‌ ಬಾಬು ಅನ್ನೋರು ರಿಯಾಕ್ಟ್‌ ಮಾಡಿದ್ದಾರೆ. ʻಡಿಎಮ್‌ಕೆ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ ಹಬ್ಬಿಸಿ ಜನರನ್ನ ಡೈವರ್ಟ್‌ ಮಾಡೋ ಕೆಲಸವನ್ನ ಖಂಡಿಸ್ತೀವಿ. ತಮಿಳುನಾಡಿನ ದೇವಸ್ಥಾನಗಳಲ್ಲಿ ಶ್ರೀರಾಮನ ಹೆಸರಲ್ಲಿ ಪೂಜೆ ಮಾಡೋಕೆ ಅಥ್ವಾ ಪ್ರಸಾದ ಹಂಚೋಕೆ ನಾವು ಯಾವ್ದೇ ರೀತಿಯ ನಿರ್ಬಂಧಗಳನ್ನ ಹೇರಿಲ್ಲ. ನಿರ್ಮಲಾ ಸೀತರಾಮನ್‌ರಂತಹ ಕೇಂದ್ರ ಸಚಿವರು ಈ ರೀತಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಹಬ್ಬಿಸ್ತಿರೋದು ನಿಜವಾಗ್ಲೂ ದುರದೃಷ್ಟಕರʼ ಅಂತ ತಿರುಗೇಟು ನೀಡಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಹಬ್ಬಿಸಿದ್ದ ಪತ್ರಿಕೆ ವಿರುದ್ಧ ಕಾನೂನು ಕ್ರಮ ತೆಗೆದ್ಕೊಳ್ಳೋದಾಗಿಯೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply