ಜೆಡಿಯು ಮುಖ್ಯಸ್ಥನ ಸ್ಥಾನದಿಂದ ಲಾಲನ್‌ ಸಿಂಗ್‌ ಔಟ್‌!

masthmagaa.com:

ರಾಜೀವ್‌ ರಂಜನ್‌ ಸಿಂಗ್‌ ಅಥ್ವಾ ಲಾಲನ್‌ ಸಿಂಗ್‌ ಅವ್ರನ್ನ ಜನತಾದಳ (ಯುನೈಟೆಡ್) ‌ಅಂದ್ರೆ JDU ಪಕ್ಷದ ಮುಖ್ಯಸ್ಥನ ಸ್ಥಾನದಿಂದ ವಜಾ ಮಾಡಲಾಗುತ್ತೆ ಅನ್ನೋ ವಿಚಾರ ಕೇಳಿ ಬಂದಿದೆ. ಅಲ್ಲದೆ ಸ್ವತಃ ಬಿಹಾರ ಸಿಎಂ ನಿತೀಶ್‌ ಕುಮಾರ್ ಅವ್ರೇ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಅಂದ್ಹಾಗೆ ಲಾಲನ್‌ ಸಿಂಗ್‌ I.N.D.I ಮೈತ್ರಿ ಕೂಟದಲ್ಲಿ ಜೆಡಿಯು ಪಕ್ಷವನ್ನ ಉತ್ತಮವಾಗಿ ಮುನ್ನಡೆಸುತ್ತಿಲ್ಲ. ಅವ್ರು RJD ವರಿಷ್ಟ ಲಾಲು ಪ್ರಸಾದ್‌ ಯಾದವ್‌ ಹಾಗೂ ಡಿಸಿಎಂ ತೇಜಸ್ವಿ ಯಾದವ್‌ ಜೊತೆ ಕ್ಲೋಸ್‌ ಆಗ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಹಾಗಾಗಿ ಪಕ್ಷ ಈ ನಿರ್ಧಾರ ಕೈಗೊಳ್ತಿದೆ ಅಂತ ತಿಳಿದು ಬಂದಿದೆ. ಡಿಸೆಂಬರ್‌ 29 ರಂದು ದೆಹಲಿಯಲ್ಲಿ ನಡೆಯೋ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply