ರೋಡಿಗೆ ಇಳಿಯಲಿವೆ ಎಥನಾಲ್‌ ಕಾರುಗಳು! ಗಡ್ಕರಿ ಹೇಳಿದ್ದೇನು?

masthmagaa.com:

ಭಾರತ ಸಾಂಪ್ರದಾಯಿಕ ಇಂಧನ ಬಳಕೆಗೆ ಬ್ರೇಕ್‌ ಹಾಕೋದ್ರಲ್ಲಿ ಒಂದು ಹೆಜ್ಜೆ ಮುಂದೆ ಇಡೋ ಸೂಚನೆ ಸಿಕ್ಕಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ದೇಶದಲ್ಲಿ 300 ಎಥನಾಲ್‌ ಫುಯೆಲ್‌ ಸ್ಟೇಷನ್‌ಗಳನ್ನ ಶೀಘ್ರದಲ್ಲೇ ಸ್ಥಾಪನೆ ಮಾಡ್ತೀವಿ ಅಂದಿದ್ದಾರೆ. ಈಗಾಗ್ಲೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಈ ಯೋಜನೆಗೆ ಕೈ ಜೋಡಿಸಿದ್ದು, ಪೆಟ್ರೋಲಿಯಮ್‌ ಸಚಿವಾಲಯ ಒಪ್ಪಿಗೆ ನೀಡೋದು ಬಾಕಿ ಇದೆ ಅಂದಿದ್ದಾರೆ. ಇನ್ನು ಕಳೆದ ವರ್ಷ ಸಚಿವ ಗಡ್ಕರಿ ಸಂಪೂರ್ಣ ಎಥನಾಲ್‌ನಿಂದ ಓಡೋ ಇನ್ನೋವಾ ಕಾರನ್ನ ರಿಲೀಸ್‌ ಮಾಡಿದ್ರು. ಅಲ್ದೇ ಎಥನಾಲ್‌ ಹಾಗೂ ಹೈಬ್ರಿಡ್‌ ಕಾರುಗಳ ಉತ್ಪಾದನೆಗೆ ಟ್ಯಾಕ್ಸ್‌ ಕಮ್ಮಿ ಮಾಡೋಕು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಕೆಲವು ದಿನಗಳಲ್ಲೇ ಎಥನಾಲ್‌ ಕಾರುಗಳು ರೋಡಿಗಿಳಿಯಲಿವೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply