ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

masthmagaa.com:

ಇತ್ತೀಚಿಗೆ ಸಿಎಜಿ ರಿಪೋರ್ಟ್ ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಖರ್ಚು ಮಾಡಲಾಗಿದೆ ಅಂತ ಆರೋಪ ಮಾಡಲಾಗಿತ್ತು. ಈ ವರದಿಯಲ್ಲಿ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಅಕ್ರಮವಾಗಿದೆ ಅಂತ ಹೇಳಲಾಗಿತ್ತು. ಇದೀಗ ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ, ಅನುದಾನವನ್ನ ದುರ್ಬಳಕೆ ಮಾಡಿಲ್ಲ ಅಂತ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ರಿಪೋರ್ಟ್‌ನಲ್ಲಿ ಪ್ರತಿ ಕಿಲೋ ಮೀಟರ್‌ಗೆ 250 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ ಅಂತ ಹೇಳಿರೋದು ತಪ್ಪು ಎಂದಿದ್ದಾರೆ. ಜೊತೆಗೆ CAG ವರದಿಯಲ್ಲಿ ಉಲ್ಲೇಖಿಸಿರುವಂತೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ಕೇವಲ 29 ಕಿಲೋ ಮೀಟರ್‌ ಉದ್ದದಲ್ಲ. ಸುರಂಗಗಳನ್ನೂ ಒಳಗೊಂಡು ಸುಮಾರು 230 ಕಿಲೋಮೀಟರ್‌ಗಳಷ್ಟು ಉದ್ದವಾಗಿದೆ. ಇದರ ಪ್ರಕಾರ ಪ್ರತಿ ಕಿಲೋಮೀಟರ್‌ಗೆ 9.5 ಕೋಟಿ ವೆಚ್ಚವಾಗ್ತಿದೆ. ಈ ಮೂಲಕ ಅಂದಾಜು ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಈ ಬಗ್ಗೆ CAG ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಸ್ಪಷ್ಟೀಕರಣದಿಂದ ಅವರಿಗೆ ಮನವರಿಕೆಯಾಗಿದೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ CAG ವರದಿಯ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ. ಅಂದ್ಹಾಗೆ CAG ತನ್ನ ವರದಿಯಲ್ಲಿ ಏನೆಲ್ಲೆ ಆರೋಪ ಮಾಡಿದೆ ಅನ್ನೊದನ್ನ ಡಿಟೇಲಾಗಿ ವರದಿ ಮಾಡಿದ್ದೇವೆ. ಅದನ್ನ ನೀವು ಚೆಕ್‌ ಮಾಡಬಹುದು.

-masthmagaa.com

Contact Us for Advertisement

Leave a Reply