9ನೇ ಬಾರಿಗೆ ಬಿಹಾರದಲ್ಲಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದ ನಿತೀಶ್!

masthmagaa.com:

ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಬೆನ್ನಲ್ಲೇ ಭಾರತದ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ ನಡೀತಿದೆ. ಭಾರತದ ಪಾಲಿಟಿಕ್ಸ್‌ನ ಜಂಪಿಂಗ್‌ ಸ್ಟಾರ್, ಪಲ್ಟುಕುಮಾರ್‌ ಅಂತಲೇ ಖ್ಯಾತಿಯಾಗಿರೋ ಬಿಹಾರದ ಸಿಎಂ ನಿತೀಶ್‌ ಕುಮಾರ್‌ ಇದೀಗ ಮಹಾಘಟಬಂಧನಕ್ಕೆ ಗುಡ್‌ಬೈ ಹೇಳಿ ಬಿಜೆಪಿ ನೇತೃತ್ವದ NDAಗೆ ಅಧಿಕೃತವಾಗಿ ಜಂಪ್‌ ಮಾಡಿದ್ದಾರೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿ ಜೊತೆ ನೂತನ ಸರ್ಕಾರ ರಚಿಸಿದ ನಿತೀಶ್‌, ಬಿಹಾರ ಸಿಎಂ ಆಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಮೂಲಕ ಒಟ್ಟು 9 ಬಾರಿ ನಿತೀಶ್‌ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಂತೆ ಆಗಿದೆ. ನಿತೀಶ್‌ ಕುಮಾರ್‌ ಜೊತೆಗೆ, ಬಿಜೆಪಿಯ ಸಾಮ್ರಾಟ ಚೌಧರಿ, ವಿಜಯ್‌ ಸಿನ್ಹಾ ಸೇರಿದಂತೆ 8 ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಾಮ್ರಾಟ್‌ ಚೌಧರಿ ಮತ್ತು ವಿಜಯ್‌ ಸಿನ್ಹಾ ಇಬ್ರು ಉಪಮುಖ್ಯಮಂತ್ರಿಗಳಾಗ್ತಾರೆ ಅಂತ ಹೇಳಲಾಗ್ತಿದೆ. ಇನ್ನು ಇದಕ್ಕೂ ಮೊದಲು ಮಹಾಘಟಬಂಧನ್‌ ಸರ್ಕಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಆಗ ಮೈತ್ರಿಯಲ್ಲಿ ಎಲ್ಲ ಸರಿ ಇರ್ಲಿಲ್ಲ. ಹೀಗಾಗಿ ಈ ಪರಿಸ್ಥಿತಿ ಬಂದಿದೆ. ನಾನು ಎಲ್ಲರಿಂದ ಸಲಹೆ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇನೆ ಅಂತ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಇನ್ನು ಈ ಕ್ಷಿಪ್ರಕ್ರಾಂತಿಗೆ ರಾಜಕೀಯದ ಹಲವು ವಲಯಗಳಿಂದ ಪ್ರತಿಕ್ರಿಯೆಗಳು ಬಂದಿವೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಪ್ರಧಾನಿ ಮೋದಿ, ಬಿಹಾರದಲ್ಲಿ ರಚನೆ ಆಗಿರೋ ಹೊಸ NDA ಸರ್ಕಾರ ಅಭಿವೃದ್ದಿ ವಿಚಾರದಲ್ಲಿ, ಅಲ್ಲಿನ ಜನರ ಆಶೋತ್ತರಗಳನ್ನ ಈಡೇರಿಸೋ ವಿಚಾರದಲ್ಲಿ ಎಲ್ಲ ಪ್ರಯತ್ನಗಳನ್ನ ಮಾಡುತ್ತೆ. ಹೊಸ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಅಂತೇಳಿದ್ದಾರೆ. ಇನ್ನು AICC ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರ ನಮಗೆ ಮೊದಲೇ ಗೊತ್ತಿತ್ತು. ದೇಶದಲ್ಲಿ ಆಯಾ ರಾಮ್‌ ಗಯಾ ರಾಮ್‌ ಅಂದ್ರೆ ಹೋದ ಪುಟ್ಟ ಬಂದ ಪುಟ್ಟ ಅನ್ನೋ ಥರ ಬಹಳ ಜನ ಇದಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply