ತಮ್ಮ ತಂದೆ ಹೆಸರನ್ನ ನೈಟ್‌ಹುಡ್‌ಗೆ ನಾಮಿನೇಟ್‌ ಮಾಡಿ ವಿವಾದಕ್ಕೆ ಗುರಿಯಾದ ಬೋರಿಸ್!

masthmagaa.con:

ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವ್ರು ಬ್ರಿಟನ್‌ ಸರ್ಕಾರ ಕೊಡುವ ನೈಟ್‌ಹುಡ್‌ ಪ್ರಶಸ್ತಿಗೆ ತಮ್ಮ ತಂದೆಯ ಹೆಸರನ್ನ ನಾಮಿನೇಟ್‌ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಬ್ರಿಟನ್‌ನಲ್ಲಿ ನಿರ್ಗಮಿತ ಪ್ರಧಾನಿ, ನೈಟ್‌ಹುಡ್‌ ಸೇರಿದಂತೆ ಕೆಲವು ಪ್ರಶಸ್ತಿಗಳಿಗೆ ಹೆಸರುಗಳನ್ನ ನಾಮನಿರ್ದೇಶನ ಮಾಡುವ ಪದ್ಧತಿಯಿದೆ. ಈ ಹಿನ್ನಲೆಯಲ್ಲಿ ಜಾನ್ಸನ್‌ ತಮ್ಮ ತಂದೆ ಸ್ಟಾನ್ಲೆ ಜಾನ್ಸನ್‌ ಅವ್ರ ಹೆಸ್ರನ್ನ ನಾಮಿನೇಟ್‌ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ವಿರೋಧ ಪಕ್ಷದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರೊ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌, ತಂದೆಯರ ದಿನ ಅಥ್ವಾ ಫಾದರ್ಸ್‌ ಡೇ ಅಂದು ಗ್ರೀಟಿಂಗ್‌ ಕಾರ್ಡ್‌ ಕೊಡ್ಬೋದೇ ಹೊರತು ನೈಟ್‌ಹುಡ್‌ ಅಲ್ಲ ಅಂತ ಹೇಳಿದ್ದಾರೆ. ಅಂದ್ರೆ ಕುಟುಂಬದ ಸದಸ್ಯರ ಹೆಸ್ರನ್ನ ಈ ರೀತಿ ನಾಮಿನೇಟ್‌ ಮಾಡೋಕೆ ಆಗಲ್ಲ ಅನ್ನೊ ಅರ್ಥದಲ್ಲಿ ಸುನಾಕ್‌ ಹೇಳಿದ್ದಾರೆ. ಜೊತೆಗೆ ಪ್ರಧಾನಿಯೊಬ್ರು ತಮ್ಮ ಕುಟುಂಬದ ಸದಸ್ಯರ ಹೆಸರನ್ನ ಪ್ರಶಸ್ತಿಗಾಗಿ ನಾಮನಿರ್ದೇಶನ ನೀಡೋದು ಸರಿಯಲ್ಲ ಅಂತ ಅಲ್ಲಿನ ವಲಸೆ ಸಚಿವರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply