MDH​ ಮತ್ತು ಎವರೆಸ್ಟ್ ಮಸಾಲೆಗಳಲ್ಲಿ ಕಾರ್ಸಿನೋಜೆನ್ ಎಥಿಲೀನ್ ಆಕ್ಸೈಡ್!

masthmagaa.com:

ದೇಶದಲ್ಲಿ MDH​ ಮತ್ತು ಎವರೆಸ್ಟ್ ಮಸಾಲೆ ಮಾದರಿಗಳಲ್ಲಿ ಕಾರ್ಸಿನೋಜೆನ್ ಎಥಿಲೀನ್ ಆಕ್ಸೈಡ್ (EtO) ಇರೋ ಬಗ್ಗೆ ಯಾವುದೇ ಸಾಕ್ಷಿಗಳು ಪತ್ತೆಯಾಗಿಲ್ಲ ಅಂತ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟಪಡಿಸಿದೆ. ವಿವಿಧ ಉತ್ಪಾದನಾ ಘಟಕಗಳಿಂದ ಭಾರತೀಯ ಮಸಾಲೆಗಳ 300 ಮಾದರಿಗಳ ಪರೀಕ್ಷೆ ನಡೆಸಿ ಆಹಾರ ಇಲಾಖೆ ಈ ಹೇಳಿಕೆ ನೀಡಿದೆ. ಅಂದ್ಹಾಗೆ ವಿದೇಶಕ್ಕೆ ರಫ್ತಾಗೊ ಭಾರತದ ಈ ಮಸಾಲೆ ಉತ್ಪನ್ನಗಳ ಬ್ರ್ಯಾಂಡ್‌ನಲ್ಲಿ ಕಾರ್ಸಿನೋಜೆನ್ ಎಥಿಲೀನ್ ಆಕ್ಸೈಡ್ ಇದೇ ಅಂತ ಸುದ್ದಿ ಹರಿದಾಡಿತ್ತು. ನೇಪಾಳ, ಹಾಕಾಂಗ್‌ನಲ್ಲಿ ಇದರ ಮೇಲೆ ನಿಷೇಧ ಹೇರಲಾಗಿತ್ತು. ಆದ್ರೆ ಬೆನ್ನಲ್ಲೆ ಭಾರತೀಯ ಆಹಾರ ಪ್ರಾಧಿಕಾರ ಈ ರೀತಿ ಹೇಳಿದೆ.

-masthmagaa.com

Contact Us for Advertisement

Leave a Reply