ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ ಕಾರಣವಲ್ಲ: ಪ್ರಾಜೆಕ್ಟ್‌ ಚೀತಾ ಮುಖ್ಯಸ್ಥ

masthmagaa.com:

ದಕ್ಷಿಣ ಆಫ್ರಿಕಾದಿಂದ ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ತಂದಿದ್ದ ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ ಕಾರಣ ಅನ್ನೊ ಆರೋಪವನ್ನ ಪ್ರಾಜೆಕ್ಟ್‌ ಹೆಡ್‌ ಕಂಪ್ಲೀಟಾಗಿ ಅಲ್ಲಗಳೆದಿದ್ದಾರೆ. ಚೀತಾಗಳ ಸಾವಿಗೆ ಅವುಗಳ ಕೊರಳಿಗೆ ಹಾಕಿದ್ದ ರೇಡಿಯೋ ಕಾಲರ್‌ ಕಾರಣ ಅಂತ ಹೇಳಲಾಗ್ತಿತ್ತು. ಇದೀಗ ಈ ಬಗ್ಗೆ ಪ್ರಾಜೆಕ್ಟ್‌ ಚೀತಾ ಹೆಡ್‌ ಎಸ್‌ಪಿ ಯಾದವ್‌ ಮಾತಾಡಿದ್ದು, ಜಗತ್ತಿನಾದ್ಯಂತ ಪ್ರಾಣಿಗಳನ್ನ ರೇಡಿಯೋ ಕಾಲರ್‌ ಬಳಸಿಯೇ ಮಾನಿಟರ್‌ ಮಾಡಲಾಗುತ್ತೆ. ರೇಡಿಯೋ ಕಾಲರ್‌ನಿಂದ ಚೀತಾಗಳು ಮೃತಪಟ್ಟಿವೆ ಅನ್ನೊದಕ್ಕೆ ಯಾವುದೇ ಸಾಕ್ಷಿ ಇಲ್ಲ. ರೇಡಿಯೋ ಕಾಲರ್‌ ಇಲ್ದೇ ಕಾಡು ಪ್ರಾಣಿಗಳನ್ನ ಮಾನಿಟರ್‌ ಮಾಡೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಭಾರತಕ್ಕೆ ತಂದಿದ್ದ ಒಟ್ಟು 20 ಚೀತಾಗಳಲ್ಲಿ 14 ವಯಸ್ಕ ಚೀತಾಗಳು ಆರೋಗ್ಯವಾಗಿವೆ. 4 ಚೀತಾ ಮರಿಗಳು ಭಾರತದ ಮಣ್ಣಿನಲ್ಲಿ ಹುಟ್ಟಿದ್ವು. ಅದ್ರಲ್ಲಿ ಮೂರು ವಾತಾವರಣಕ್ಕೆ ಹೊಂದಿಕೊಳ್ಳದೇ ಮೃತಪಟ್ಟಿವೆ. ಇನ್ನೊಂದು 6 ತಿಂಗಳ ಮರಿ ಹೆಲ್ದಿಯಾಗಿದೆ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply