ಪೆನ್‌ಡ್ರೈವ್‌ ಪ್ರಕರಣ: ಮಾಜಿ ಸಚಿವ, ಶಾಸಕ HD ರೇವಣ್ಣ ಬಂಧನ!!

masthmagaa.com:

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಕುಟುಂಬದ ಮೇಲೆ ಕೇಳಿಬರ್ತಿರೋ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ದಿಕ್ಕು ಪಡೀತಿದೆ. ದೇಶದಲ್ಲೇ ಅತಿದೊಡ್ಡ ಲೈಂಗಿಕ ಹಗರಣ ಅಂತ ಸುದ್ದಿಯಾಗ್ತಿರೋ ಈ ಕೇಸ್‌ನಲ್ಲೀಗ ಯಾವುದೇ ಸಮಯದಲ್ಲಿ ಶಾಸಕ, ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಬಂಧನವಾಗ್ಬಹುದು ಅಂತ ಹೇಳಲಾಗ್ತಿದೆ. ಈ ಪ್ರಕರಣದ ಸಂತ್ರಸ್ಥೆಯೊಬ್ಬರನ್ನ ರೇವಣ್ಣ ಅವ್ರು ಕಿಡ್ನಾಪ್‌ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು. ಈ ಸಂಬಂಧ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ರು. ಆದ್ರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ ತೀರ್ಪನ್ನ ಕಾಯ್ದಿರಿಸಿದೆ. ಜೊತೆಗೆ ಮೇ 6ಕ್ಕೆ ವಿಚಾರಣೆ ಮುಂದೂಡಿದೆ. ಹೀಗಾಗಿ ರೇವಣ್ಣ ಅವ್ರಿಗೆ ರಿಲೀಫ್‌ ಸಿಕ್ಕಿಲ್ಲ. ಅಲ್ಲದೇ ಈಗಾಗಲೇ SITಯ ಮೂರು ನೋಟಿಸ್‌ಗಳಿಗೆ ಉತ್ತರ ನೀಡದೇ ಇರೋದ್ರಿಂದ ಯಾವುದೇ ಕ್ಷಣದಲ್ಲಿ ರೇವಣ್ಣ ಅವ್ರ ಬಂಧನವಾಗ್ಬಹುದು ಅನ್ನೋ ಪರಿಸ್ಥಿತಿ ಇತ್ತು. ಹೀಗಾಗಿ ರೇವಣ್ಣ ಅವ್ರನ್ನ ಹುಡುಕಿಕೊಂಡು SIT ತಂಡ ಪದ್ಭನಾಭನಗರದಲ್ಲಿರೋ HD ದೇವೇಗೌಡರ ಮನೆಗೆ ಹೋಗಿ ರೇವಣ್ಣರನ್ನ ಸದ್ಯ ಅವ್ರನ್ನ ಅರೆಸ್ಟ್‌ ಮಾಡಿದೆ.. ಇನ್ನು ಈ ಕೇಸ್‌ನಲ್ಲಿ ಏಪ್ರಿಲ್‌ 29ರಂದು ಕೆ.ಆರ್‌.ನಗರದಲ್ಲಿ ಅಪಹರಣಕ್ಕೊಳಗಾಗಿದ್ದ ಸಂತ್ರಸ್ಥೆಯನ್ನ SIT ರಕ್ಷಣೆ ಮಾಡಿದೆ. ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರೇವಣ್ಣ ಅವ್ರ ಪಿಎ ರಾಜಶೇಖರ್ ಅವ್ರ ತೋಟದ ಮನೆಯಿಂದ ಸಂತ್ರಸ್ಥೆಯನ್ನ ಸದ್ಯ ರಕ್ಷಣೆ ನೀಡಿ SIT ಕರೆದೊಯ್ದಿದೆ ಅಂತ ಮಾಹಿತಿ ಲಭ್ಯ ಆಗಿದೆ. ಮತ್ತೊಂದ್‌ಕಡೆ ಮಹಿಳೆ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಅಂತ ಹೇಳಲಾಗಿದೆ. ರೇವಣ್ಣ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕೇಸ್‌ ವಿಚಾರವಾಗಿ ಅವ್ರ ಹೊಳೆನರಸೀಪುರದ ನಿವಾಸಕ್ಕೆ ದೂರು ನೀಡಿದ ಸಂತ್ರಸ್ಥೆಯ ಜೊತೆ ಆಗಮಿಸಿದ SIT ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ಥೆ ನೀಡಿದ್ದ ದೂರಿನ ಹಿನ್ನಲ್ಲೆ ರೇವಣ್ಣನ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೇವಣ್ಣ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿ ಇದ್ದು, ಪಂಚನಾಮೇ ಬಳಿಕ ಸಂತ್ರಸ್ಥೆ ಹೇಳಿಕೆಯನ್ನ ಅಧಿಕಾರಿಗಳು ಸ್ಥಳದಲ್ಲೆ ದಾಖಲು ಮಾಡ್ಕೊಂಡಿದ್ದಾರೆ. ಇನ್ನು SIT ಅಧಿಕಾರಿಗಳು ತನಿಖೆ ನಡೆಸ್ತಿರೊವಾಗ ಇದೇ ವೇಳೆ ರೇವಣ್ಣನ ಮನೆಗೆ ಅವ್ರ ಬೆಂಬಲಿಗರು ಕೂಡ ನುಗ್ಗಿದ್ರು. ಈ ವೇಳೆ ಬೆಂಬಲಿಗರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಈ ಕೇಸ್‌ನಲ್ಲಿ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಮೇ 10ರ ಒಳಗೆ ದೇಶಕ್ಕೆ ಬಂದು SIT ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ನುರಿತ ವಕೀಲರ ಸಲಹೆಯ ಮೇರೆಗೆ ಪ್ರಜ್ವಲ್‌ ಈ ನಿರ್ಧಾರ ಕೈಗೊಂಡಿದ್ದಾರೆ ಅಂತ ಗೊತ್ತಾಗಿದೆ. ಆದ್ರೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರೋ ಪ್ರಜ್ವಲ್‌ ದೇಶದಿಂದ ದೇಶಕ್ಕೆ ಹಾರ್ತಿದ್ದಾರೆ ಅಂತ ಗೊತ್ತಾಗಿದೆ. ಸದ್ಯ ಜರ್ಮನ್‌ನ ಮ್ಯೂನಿಕ್‌ನಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್‌ಗೆ ಪ್ರಜ್ವಲ್‌ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗ್ತಿದೆ. ಅಲ್ದೇ ಬುಡಾಪೆಸ್ಟ್‌ನಲ್ಲಿ ಪ್ರಜ್ವಲ್‌ರ ಪಾಸ್‌ಪೋರ್ಟ್‌ ಎಂಟ್ರಿಯಾಗಿರೊ ಬಗ್ಗೆ SIT ಅಧಿಕಾರಿಗಳಿಗೆ ಮಾಹಿತಿ ಇದೆ ಅಂತೇಳಲಾಗ್ತಿದೆ. ಹೀಗಾಗಿ ಪ್ರಜ್ವಲ್‌ ವಿರುದ್ದ ವಿರುದ್ಧ ಬ್ಲೂ ಕಾರ್ನರ್‌ ನೋಟಿಸ್ ಹೊರಡಿಸುವಂತೆ SITಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ರೀತಿ ವಿದೇಶಗಳಲ್ಲಿರೋ ಆರೋಪಿಗಳ ಬಂಧನಕ್ಕಾಗಿ ವಿಶ್ವಾದ್ಯಂತ ಪೋಲಿಸ್‌ ಸಂಸ್ಥೆಗಳು ಇಂಟರ್‌ಪೋಲ್‌ ಅನ್ನೋ ವ್ಯವಸ್ಥೆ ಮಾಡ್ಕೊಂಡಿವೆ. ಇಲ್ಲಿ ಪ್ರಕರಣದ ಗಂಭೀರತೆ ಆಧಾರದ ಮೇಲೆ ರೆಡ್‌, ಗ್ರೀನ್‌, ಯೆಲ್ಲೋ, ಬ್ಲೂ ಅಂತ ವಿವಿಧ ನೋಟಿಸ್‌ ಹೊರಡಿಸಲಾಗುತ್ತೆ. ಅದ್ರಲ್ಲಿ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿದ್ರೆ, ಆ ದೇಶದ ಪೋಲಿಸರು ಆರೋಪಿ ಎಲ್ಲಿದಾನೆ, ಏನ್‌ ಮಾಡ್ತಿದ್ದಾನೆ, ಅವನ ಲೊಕೇಷನ್‌ ಏನು ಅನ್ನೋ ಮಾಹಿತಿಯನ್ನ ನೀಡಬೇಕಾಗುತ್ತೆ. ಈಗ ಸದ್ಯ ಪ್ರಜ್ವಲ್‌ ಮೇಲೆ ತೀವ್ರ ನಿಗಾ ಇಡಲು SIT ಈ ಕ್ರಮಕ್ಕೆ ಮುಂದಾಗಿದೆ. ಇನ್ನು ಈ ಕೇಸ್‌ ವಿಚಾರವಾಗಿ ಪ್ರಜ್ವಲ್‌ರ ಸಹೋದರ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ನೋವಾಯ್ತು, ವಿಡಿಯೋ ನೋಡೋಕೆ ಧೈರ್ಯ ಬರಲಿಲ್ಲ. ಕಾನೂನಿಗಿಂತ ಯಾರು ದೊಡ್ಡವರಲ್ಲ, ಈಗಾಗಲೇ ಎಸ್‌ಐಟಿ ರಚನೆಯಾಗಿದೆ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply