ತಿರುಪತಿ ಲಡ್ಡುವಿನಲ್ಲಿ ಇನ್ಮುಂದೆ ಇರೋದಿಲ್ಲ ನಂದಿನಿ ತುಪ್ಪದ ಘಮಲು! ಯಾಕೆ?

masthmagaa.com:

ಸುಮಾರು 50 ವರ್ಷಗಳಿಂದ ತಿರುಪತಿ ತಿಮ್ಮಪ್ಪರ ಸನ್ನಿಧಿಯಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸುತ್ತಿದ್ದ ನಂದಿನಿ ತುಪ್ಪ ಖರೀದಿಯನ್ನು TTD ಸ್ಥಗಿತಗೊಳಿಸಿರೋ ವಿಚಾರ ಈಗ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ ಕೆಎಂಎಫ್‌ ಅಧ್ಯಕ್ಷ ಬೀಮಾನಾಯಕ್‌, 2022ರಿಂದ ನಾವು ತಿರುಪತಿಗೆ ನಂದಿನಿ ತುಪ್ಪ ಪೂರೈಸುತ್ತಿಲ್ಲ. ನಾವು ಕೇಳಿದ ದರಕ್ಕೆ ಒಪ್ಪಿದರೆ ನಂದಿನಿ ತುಪ್ಪ ಪೂರೈಕೆ ಮಾಡುತ್ತೇವೆ. ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ. ಬದ್ಲಾಗಿ ತುಪ್ಪ ಪೂರೈಸಲು ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯನ್ನು ಟಿಟಿಡಿ ಆಯ್ಕೆ ಮಾಡಿದೆ ಅಂತ KMF ಅಧ್ಯಕ್ಷ ಭೀಮಾನಾಯಕ್‌ ಹೇಳಿದ್ದಾರೆ. ಜೊತೆಗೆ ನಂದಿನಿ ತುಪ್ಪವನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಗುಣಮಟ್ಟವನ್ನ ಬೇರೆ ಕಂಪೆನಿಗಳಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply