ಯುಕ್ರೇನ್‌ನಲ್ಲಿ ರಷ್ಯಾ ದಾಳಿ ತೀವ್ರ! ಈ ಕಡೆ ಯುದ್ದ ಬೇಡ ಎಂದು ಬೋರ್ಡ್‌ ಹಿಡಿದ ರಷ್ಯಾ ಮಕ್ಕಳು!

masthmagaa.com:

ವರ್ಷ ತುಂಬಿದರೂ ಯುದ್ದ ಕಂಟಿನ್ಯೂ ಮಾಡ್ತಿರೋ ರಷ್ಯಾ, ಯುಕ್ರೇನ್‌ ಮೇಲಿನ ತನ್ನ ದಾಳಿಯನ್ನ ತೀವ್ರಗೊಳಿಸಿದೆ. ಈಗ ಹೊಸದಾಗಿ ಯುಕ್ರೇನ್‌ನ ಬಹುತೇಕ ದೊಡ್ಡ ದೊಡ್ಡ ನಗರಗಳ ಮೇಲೆ ರಷ್ಯಾ ಪಡೆ ಮೇಲೆ ದಾಳಿ ಮಾಡಿವೆ. ಯುಕ್ರೇನ್‌ನ ಖಾರ್ಕೀವ್‌, ರಾಜಧಾನಿ ಕಿಯೇವ್‌ ಹಾಗೂ ಒಡೆಸ್ಸಾ ನಗರಗಳ ಮೇಲೆ ರಷ್ಯಾ ಮಿಸೈಲ್‌ ದಾಳಿ ಮಾಡಿದೆ ಅಂತ ಯುಕ್ರೇನ್‌ ಹೇಳಿದೆ. ಈ ಕಡೆ ಯುಕ್ರೇನ್‌ ವಿರುದ್ದ ರಷ್ಯಾ ಕೈಗೊಂಡಿರೋ ಸೋ ಕಾಲ್ಡ್‌ ಸೇನಾ ಕಾರ್ಯಚರಣೆಯನ್ನ ಬಂದ್‌ ಮಾಡಬೇಕು ಅಂತ ರಷ್ಯಾದಲ್ಲಿ ಎದ್ದಿರೋ ಕೂಗು ಇನ್ನೂ ಕೂಡ ಶಾಂತವಾಗಿಲ್ಲ. ಇದೀಗ ರಷ್ಯಾದ ಮಕ್ಕಳು ಕೂಡ ಪ್ರತಿಭಟನೆ ಮಾಡಿದ್ದು, ಯುದ್ದ ಬೇಡ ಅಂತ ಬೋರ್ಡ್‌ಗಳನ್ನ ಹಿಡಿದಿರೋದು ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply