44 ವರ್ಷ ಜೈಲಲ್ಲಿದ್ದ ವ್ಯಕ್ತಿಗೆ 207 ಕೋಟಿ ಕೊಟ್ಟ ಸರ್ಕಾರ! ಯಾಕೆ?

masthmagaa.com:

ಅಮೆರಿಕದ ನಾರ್ತ್ ಕ್ಯಾರೋಲಿನಾದಲ್ಲಿ 44 ವರ್ಷಗಳಿಂದ ಜೈಲಲ್ಲಿದ್ದ ನಿರಪರಾಧಿ ಒಬ್ರಿಗೆ 207 ಕೋಟಿ ಪರಿಹಾರ ಸಿಕ್ಕಿದೆ.‌ ರೂನಿ ವಲ್ಲಾನ್ಸ್‌ ಲಾಂಗ್‌ ಅನ್ನೋ ಕಪ್ಪು ವರ್ಣೀಯ ವ್ಯಕ್ತಿಗೆ ಕೋರ್ಟ್‌ನ ಬಿಳಿಯರಿದ್ದ ಜೂರಿ ಅಥ್ವಾ ನ್ಯಾಯಾಧೀಶರ ತಂಡ ಶಿಕ್ಷೆ ನೀಡಿತ್ತು. 1976ರಲ್ಲಿ ಅತ್ಯಾಚಾರ ಹಾಗೂ ದಡೋರೆ ಕೇಸ್‌ನಲ್ಲಿ ಇವ್ರಿಗೆ ಶಿಕ್ಷೆ ನೀಡಲಾಗಿತ್ತು. ಶಾಕಿಂಗ್‌ ವಿಚಾರ ಏನಂದ್ರೆ ಇವ್ರಿಗೆ ಶಿಕ್ಷೆ ನೀಡಿದ್ದ ಜ್ಯೂರಿಯನ್ನ ಲೋಕಲ್‌ ಲೀಡರ್‌ಗಳು ಸೆಲೆಕ್ಟ್‌ ಮಾಡಿದ್ರಂತೆ. ನಂತರ 2020ರಲ್ಲಿ ಇವರು ನಿರಪರಾಧಿ ಅಂತ ಪ್ರೂವ್‌ ಆಗಿ ರಿಲೀಸ್‌ ಮಾಡ್ಲಾಗಿತ್ತು. ಇದೀಗ ಕೋರ್ಟ್‌ ಇವ್ರಿಗೆ ಸುಮಾರು 207 ಕೋಟಿ ರೂಪಾಯಿ ಪರಿಹಾರ ನೀಡಿದೆ. ಇದ್ರಲ್ಲಿ 180 ಕೋಟಿಯನ್ನ ಸ್ಥಳೀಯ ಸರ್ಕಾರ ಕೊಡ್ಬೇಕು ಅಂತ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply