ಉ.ಕೊರಿಯಾ: ರಕ್ಷಣಾ ಸ್ಟ್ರಾಟಜಿ ಚರ್ಚಿಸಲು ಕಿಮ್‌ ನೇತೃತ್ವದಲ್ಲಿ ಪ್ರಮುಖ ಸಭೆ

masthmagaa.com:

ಈಗಾಗಲೇ ತನ್ನ ಸಾಲು ಸಾಲು ಕ್ಷಿಪಣಿ ಪರೀಕ್ಷೆಗಳಿಂದ ನೆರೆಹೊರೆಯ ರಾಷ್ಟ್ರಗಳ ನಿದ್ದೆಗೆಡಿಸಿರೋ ಉತ್ತರ ಕೊರಿಯಾ, ಇದೀಗ ತನ್ನ ರಕ್ಷಣಾ ಸ್ಟ್ರಾಟಜಿಯನ್ನ ಡಿಸ್ಕಸ್‌ ಮಾಡೋಕೆ ಪ್ರಮುಖ ಸಭೆಯನ್ನ ಆರಂಭಿಸಿದೆ. ಬದಲಾಗ್ತಿರೋ ಅಂತಾರಾಷ್ಟ್ರೀಯ ಪರಿಸ್ಥಿತಿಗೆ ರೆಡಿಯಾಗಲು ಈ ಪ್ರಮುಖ ಸಭೆಯನ್ನ ನಡೆಸಲಾಗ್ತಿದೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ನೇತೃತ್ವದಲ್ಲಿ ಈ ಸಭೆ ಹಲವು ದಿನಗಳವರೆಗೆ ನಡೆಯಲಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜೊತೆಯಾಗಿ ಸೇನಾಭ್ಯಾಸ ನಡೆಸುತ್ತಿವೆ. ಅದರ ಬೆನ್ನಲ್ಲೇ ಉತ್ತರ ಕೊರಿಯಾ ನಿನ್ನೆ ಬ್ಯಾಲೆಸ್ಟಿಕ್‌ ಮಿಸೈಲ್‌ನ್ನ ಹಾರಿಸಿತ್ತು. ಇದೀಗ ತನ್ನ ರಕ್ಷಣಾ ಸ್ಟ್ರಾಟಜಿಯನ್ನ ಕುರಿತು ಚರ್ಚಿಸೋಕೆ ಸಭೆ ನಡೆಸುತ್ತಿದ್ದು ಕುತೂಹಲ ಮೂಡಿಸಿದೆ.

-masthmagaa.com

Contact Us for Advertisement

Leave a Reply