ಉತ್ತರ ಕೊರಿಯಾ‌ದಲ್ಲಿ ಮತ್ತೆ ಕ್ಷಿಪಣಿ ಪರೀಕ್ಷೆ: ಇನ್ನಷ್ಟು ನಿರ್ಬಂಧನ ಹೇರಲು ಅಮೆರಿಕ ಸಜ್ಜು

masthmagaa.com:

ಕಿಮ್‌ ಜಾಂಗ್‌ ಉನ್‌, ತಮ್ಮ ಪರಮಾಣು ಶಸ್ತ್ರಗಾರವನ್ನ ಸಾಧ್ಯವಾದಷ್ಟು ಫಾಸ್ಟ್‌ ಆಗಿ ಬಲಗೊಳಿಸ್ತೀವಿ ಅಂತ ಹೇಳಿಕೆ ನೀಡಿದ ಬೆನ್ನಲ್ಲೆ, ಉತ್ತರ ಕೊರಿಯಾ‌ ಬ್ಯಾಲೆಸ್ಟಿಕ್ ಮಿಸೈಲ್ ಒಂದನ್ನ ಹಾರಿಸಿದೆ. ಇವತ್ತು ಬೆಳಿಗ್ಗೆ 8.33 ಕ್ಕೆ (3.03 GMT) ಸುನಾನ್‌ನಿಂದ ಜಪಾನ್‌ನ ಪೂರ್ವ ಸಮುದ್ರ ಕಡೆಗೆ ಉತ್ತರಕೊರಿಯಾ ಕ್ಷಿಪಣಿ ಹಾರಿಸಿದ್ದು ಪತ್ತೆಯಾಗಿದೆ ಅಂತ ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ. ಈ ರೀತಿ ಸಾಲಾಗಿ ಕ್ಷಿಪಣಿ ಪರೀಕ್ಷೆ ಮಾಡ್ತಿರೋ ಉತ್ತರ ಕೊರಿಯಾ ವಿರುದ್ದ ಮತ್ತಷ್ಟು ನಿರ್ಬಂಧನೆಗಳನ್ನ ವಿಧಿಸೋಕೆ ಮತದಾನ ಮಾಡ್ಬೇಕು ಅಂತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅಮೆರಿಕ ಮನವಿ ಮಾಡಿದೆ. ಇನ್ನು ಭದ್ರತಾ ಮಂಡಳಿ ಈ ನಿರ್ಣಯವನ್ನ ಅಂಗೀಕಾರ ಆಗಬೇಕು ಅಂದ್ರೆ ಖಾಯಂ ರಾಷ್ಟ್ರಗಳ, ಅಂದ್ರೆ ಚೀನಾ, ರಷ್ಯಾ, ಫ್ರಾನ್ಸ್‌, ಅಮೆರಿಕ, ಬ್ರಿಟನ್, ಈ ಐದೂ ರಾಷ್ಟ್ರಗಳು‌ ವೀಟೋ ಮಾಡಬಾರದು. ಪರವಾಗಿ ಓಟ್ ಮಾಡಬೇಕು ಹಾಗೂ ಇನ್ನೂ ನಾಲ್ಕು ನಾನ್ ಪರ್ಮನೆಂಟ್ ಮೆಂಬರ್ಸ್ ಕೂಡ ಪರವಾಗಿ ವೋಟ್ ಮಾಡಬೇಕು. ಆದ್ರ ವೀಟೋ ಪವರ್ ಇರೋ ರಷ್ಯಾ ಮತ್ತು ಚೀನಾ, ಕಿಮ್ ದೇಶದ ಮೇಲೆ ನಿರ್ಬಂಧ ಹೆಚ್ಚಿಸೋಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿವೆ.

-masthmagaa.com

Contact Us for Advertisement

Leave a Reply