ಜಪಾನ್‌ ಸಮುದ್ರಕ್ಕೆ ಮತ್ತೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ!

masthmagaa.com:

ಉತ್ತರ ಕೊರಿಯಾ ಇತ್ತೀಚೆಗೆ ಸರಣಿ ಮಿಸೈಲ್‌ ಲಾಂಚ್‌ ಮಾಡಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಅನ್‌ಐಡೆಂಟಿಫೈಡ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಒಂದನ್ನ ಜಪಾನ್‌ ಸಮುದ್ರಕ್ಕೆ ಲಾಂಚ್‌ ಮಾಡಿದೆ ಅಂತ ದಕ್ಷಿಣ ಕೊರಿಯಾ ಆರೋಪಿಸಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಉಗ್ರ ಸೇನಾ ಪ್ರತಿಕ್ರಿಯೆ ಕೊಡೋದಾಗಿ ಉತ್ತರ ಕೊರಿಯಾ ಇತ್ತೀಚಿಗಷ್ಟೇ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಈ ಲಾಂಚ್‌ ಮಾಡಿದೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಉತ್ತರ ಕೊರಿಯಾದ ಸರಣಿ ಮಿಸೈಲ್‌ ಲಾಂಚ್‌ ಕುರಿತು ಚೀನಾ ಹತ್ತಿರ ಜಿ20 ಸಭೆ ವೇಳೆ ಮಾತುಕತೆ ನಡೆಸಿದ್ದರು. ತನ್ನ ಪ್ರಭಾವ ಬಳಸಿ ಉತ್ತರ ಕೊರಿಯಾವನ್ನ ಕಂಟ್ರೋಲ್‌ ಮಾಡಿ ಅಂತ ಕೇಳಿಕೊಂಡಿದ್ದರು. ಜೊತೆಗೆ ಈ ಸಂಬಂಧ ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜೊತೆನೂ ಮಾತುಕತೆ ನಡೆಸಿದ್ರು ಅಂತ ವೈಟ್‌ ಹೌಸ್‌ ಹೇಳಿದೆ. ಇತ್ತ ಈ ರೀತಿಯ ಚರ್ಚೆಗಳು ಕೊರಿಯನ್‌ ಪ್ರದೇಶದಲ್ಲಿ ಈಗಿರೊ ಪರಿಸ್ಥಿತಿಯನ್ನ ಊಹೆ ಮಾಡೋಕೆ ಆಗ್ದೆ ಇರೋ ಹಂತಕ್ಕೆ ತಗೊಂಡ್‌ ಹೋಗುತ್ವೆ ಅಂತ ಉತ್ತರ ಕೊರಿಯಾದ ವಿದೇಶಾಂಗ ಸಚಿವ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply