ಅಮೆರಿಕದ ಜೊತೆ ಕೂತು ಮಾತಾಡೋಕೆ ಸಾಧ್ಯವೇ ಇಲ್ಲ: ಉತ್ತರ ಕೊರಿಯಾ

masthmagaa.com:

ಉತ್ತರ ಕೊರಿಯಾ ಎಂದಿಗೂ ಅಮೆರಿಕದ ಜೊತೆ ಯಾವುದೇ ರೀತಿ ಮಾತುಕತೆ ನಡೆಸೋದಿಲ್ಲ ಅಂತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಸಹೋದರಿ ಕಿಮ್‌ ಯೋ ಜಾಂಗ್‌ ಹೇಳಿದ್ದಾರೆ. ಇತ್ತೀಚೆಗೆ ಕಿಮ್ಮಣ್ಣನ ಆಡಳಿತ ಅಮೆರಿಕದ ವಿರೋಧದ ನಡುವೆಯತೂ ತನ್ನ ಮೊದಲ ಸ್ಪೈ ಸ್ಯಾಟಲೈಟ್‌ನ್ನ ಯಶಸ್ವಿಯಾಗಿ ಲಾಂಚ್‌ ಮಾಡಿತ್ತಲ್ಲ. ಅದರ ಬಗ್ಗೆ ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಲಿಂಡಾ ಥಾಮಸ್‌ ಗ್ರೀನ್‌ಫೀಲ್ಡ್‌ ಹಾಗೂ ಉತ್ತರ ಕೊರಿಯಾ ರಾಯಭಾರಿ ಕಿಮ್‌ ಸಾಂಗ್‌ ಅವರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಉಭಯ ಅಧಿಕಾರಿಗಳು ತಮ್ಮ ರಾಷ್ಟ್ರಗಳ ಮಿಲಿಟರಿ ಚಟುವಟಿಕೆಗಳು ಕೇವಲ ತಮ್ಮ ದೇಶಗಳ ರಕ್ಷಣೆಗಾಗಿ ಮಾತ್ರ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ವೇಳೆ ಉತ್ತರ ಕೊರಿಯಾದ ಜೊತೆ ಮಾತುಕತೆ ನಡೆಸೋಕೆ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನ ಸ್ಟಾರ್ಟ್‌ ಮಾಡೋಕೆ ಅಮೆರಿಕ ರೆಡಿಯಿದೆ ಅಂತ ಲಿಂಡಾ ಥಾಮಸ್‌ ಹೇಳಿದ್ದಾರೆ. ಈ ವಿಚಾರವಾಗಿ ರಿಯಾಕ್ಟ್‌ ಮಾಡಿರೋ ಕಿಮ್‌ ಜೋ, ʻʻಮತ್ತೊಮ್ಮೆ ನಾವು ಅಮೆರಿಕಗೆ ಕ್ಲಿಯರ್‌ ಮಾಡೋಕೆ ಬಯಸ್ತೀವಿ, ಉತ್ತರ ಕೊರಿಯಾ ಯಾವತ್ತಿಗೂ ಈ ರೀತಿಯ ಅಮೆರಿಕದ ಮಾತುಕತೆಗಳಿಗೆ ಅಜೆಂಡಾ ಆಗೋದಿಲ್ಲ. ಅಲ್ದೆ ಅಂಥಹಾ ಉದ್ಧೇಶಗಳಿಗಾಗಿ ಅಮೆರಿಕ ಜೊತೆ ಉತ್ತರ ಕೊರಿಯಾ ಫೇಸ್‌ ಟು ಫೇಸ್‌ ಕುತ್ಕೊಂಡು ಮಾತಾಡಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply