2ನೇ ಬಾರಿಯೂ ವಿಫಲವಾದ ಕಿಮ್ಮಣ್ಣನ ಸ್ಪೈ ಸ್ಯಾಟ್‌ಲೈಟ್‌ ಲಾಂಚ್!‌ ಯಾಕೆ?

masthmagaa.com:

ದೇಶದ ಮೊದಲ ಸ್ಪೈ ಸ್ಯಾಟ್‌ಲೈಟ್‌ನ್ನ ಯಶಸ್ವಿಯಾಗಿ ಹಾರಿಸುವಲ್ಲಿ ಉತ್ತರ ಕೊರಿಯಾ ಮತ್ತೊಮ್ಮೆ ವಿಫಲವಾಗಿದೆ. ಇಂದು ಬೆಳಿಗ್ಗೆ Malligyong-1 ಉಪಗ್ರಹವನ್ನ ಅಲ್ಲಿನ ಸೊಹೇ ಸ್ಯಾಟ್‌ಲೈಟ್‌ ಲಾಂಚ್‌ ಸ್ಟೇಶನ್‌ನಿಂದ ಲಾಂಚ್‌ ಮಾಡಲಾಗಿತ್ತು. ರಾಕೆಟ್‌ನ ಮೊದಲೆರಡು ಸ್ಟೇಜ್‌ಗಳು ನಾರ್ಮಲ್‌ ಆಗಿಯೇ ಇದ್ವು. ಬಳಿಕ ಮೂರನೇ ಹಂತದಲ್ಲಿ ಎಮರ್ಜನ್ಸಿ ಬ್ಲಾಸ್ಟಿಂಗ್‌ ಸಿಸ್ಟಮ್‌ನಲ್ಲಿ ಎರರ್‌ ಉಂಟಾಗಿ ಲಾಂಚ್‌ ವಿಫಲವಾಗಿದೆ ಅಂತ ಅಲ್ಲಿನ ಅಧಿಕೃತ ಮಾಧ್ಯಮ ಹೇಳಿದೆ. ಇನ್ನು ಲಾಂಚ್ ವಿಫಲವಾದ ಬೆನ್ನಲ್ಲೇ ಇದೇನು ಅಂತ ದೊಡ್ಡ ಸಮಸ್ಯೆ ಅಲ್ಲ. ಇದರ ಬಗ್ಗೆ ತನಿಖೆ ಮಾಡಿ ಅಕ್ಟೋಬರ್‌ನಲ್ಲಿ ಮತ್ತೆ ಉಡಾವಣೆ ಮಾಡಲಾಗುತ್ತೆ ಅಂತ ಉತ್ತರ ಕೊರಿಯಾ ಹೇಳಿದೆ. ಅಂದ್ಹಾಗೆ ಕಳೆದ ಕೆಲ ತಿಂಗಳ ಹಿಂದೆ ನಡೆಸಿದ್ದ ಮೊದಲ ಉಡಾವಣೆ ಕೂಡ ಫೇಲ್‌ ಆಗಿತ್ತು.

-masthmagaa.com

Contact Us for Advertisement

Leave a Reply