ಅಮೇರಿಕನ್‌ ನೇವಿ ಹಡಗಿಗೆ ಕಿಮ್ಮಣ್ಣನ ನ್ಯೂಕ್ಲಿಯರ್‌ ಬೆದರಿಕೆ!

masthmagaa.com:

ಅಮೇರಿಕಾ, ಸೌತ್ ಕೊರಿಯಾ, ಜಪಾನ್‌ ಈ ವಾರದಲ್ಲಿ ನೌಕಾ ಅಭ್ಯಾಸ ಹಮ್ಮಿಕೊಂಡಿವೆ. ಇದರ ಅಂಗವಾಗಿ ಅಮೆರಿಕದ ರೋನಾಲ್ಡ್‌ ರೇಗನ್‌ ನ್ಯೂಕ್ಲಿಯರ್‌ ಹಡಗುಗಳು ದಕ್ಷಿಣ ಕೊರಿಯಾದ ಬುಸಾನ್‌ ಬಂದರಿಗೆ ತಲುಪಿವೆ. ಹೆಚ್ಚುತ್ತಿರೋ ಉತ್ತರ ಕೊರಿಯಾ ಅಣ್ವಸ್ತ್ರ ಬೆದರಿಕೆಗೆ ಪ್ರತ್ಯುತ್ತರವಾಗಿ ಅಮೆರಿಕದ ಪರಮಾಣು ಶಸ್ತ್ರಾಸ್ತ್ರಗಳನ್ನ ಈ ಭಾಗದಲ್ಲಿ ನಿಯೋಜನೆ ಮಾಡೋ ಒಪ್ಪಂದಕ್ಕೆ ಅಮೆರಿಕಾ-ದಕ್ಷಿಣ ಕೊರಿಯಾ ಸಹಿ ಹಾಕಿವೆ. ಹೀಗಾಗಿ ಈ ಹಡಗುಗಳು 5 ದಿನಗಳ ಕಾಲ ಬುಸಾನ್‌ ಬಂದರಿನಲ್ಲೇ ಇರಲಿವೆ ಅಂತ ದಕ್ಷಿಣ ಕೊರಿಯಾದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರ ಸಹಜವಾಗಿಯೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ರ ನಿದ್ದೆ ಕೆಡಿಸಿದೆ. ಈ ಬಗ್ಗೆ ಪ್ರತಿಕ್ರಿಸಿರೋ ಉತ್ತರ ಕೊರಿಯಾ ಇದು ಅಮೇರಿಕಾದ ಪ್ರಚೋದನಾತ್ಮಕ ನೀತಿಯಾಗಿದ್ದು, ಇದರಿಂದ ನಮ್ಮನ್ನ ಡಿಫೆಂಡ್‌ ಮಾಡ್ಕೊಳೋಕೆ ಮುಂಜಾಗೃತಾ ಕ್ರಮವಾಗಿ ನಾವು ಸಹ ಅಣ್ವಸ್ತ್ರವನ್ನ ಉಪಯೋಗಿಸೋಕೆ ಹಿಂಜರಿಯಲ್ಲ ಅಂತ ಎಚ್ಚರಿಕೆ ನೀಡಿದೆ.

-masthmagaa.com

Contact Us for Advertisement

Leave a Reply