ಪರಮಾಣು ಆಯುಧಗಳನ್ನ ವೇಗವಾಗಿ ಅಭಿವೃದ್ಧಿಪಡೆಸ್ತೇವೆ: ಕಿಮ್‌ ಜಾಂಗ್‌ ಉನ್‌

masthmagaa.com:

ಅಮೆರಿಕದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್‌ ಜಾಂಗ್‌ ಉನ್‌, ಈಗ ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳನ್ನ ತ್ವರಿತಗತಿಯಲ್ಲಿ ಬಲಪಡಿಸ್ತೇನೆ ಅಂತ ಹೇಳಿದ್ದಾರೆ. ಕೊರಿಯನ್‌ ಸೇನೆ ಕೊರಿಯನ್‌ ಪೀಪಲ್ಸ್‌ ರಿವಾಲುಷನರಿ ಆರ್ಮಿಯ 90ನೇ ಸಂಸ್ಥಾಪನ ದಿನದ ಅಂಗವಾಗಿ ಮಾತಾಡಿರೋ ಕಿಮ್‌ ಜಾಂಗ್‌ ಉನ್‌, ಮುಂಬರುವ ರಾಜಕೀಯ ಮತ್ತು ಮಿಲಿಟರಿ ಪ್ರಕ್ಷುಬ್ಧ ಸ್ಥಿತಿಗಳಿಗೆ, ಜೊತೆಗೆ ಎಲ್ಲ ರೀತಿಯ ಬಿಕ್ಕಟ್ಟುಗಳಿಗೆ ಸನ್ನದ್ಧರಾಗೋಕೆ ತೀವ್ರಗತಿಯಲ್ಲಿ ನ್ಯೂಕ್ಲಿಯರ್‌ ಪಡೆಗಳನ್ನ ಅಭಿವೃದ್ಧಿ ಪಡೆಸ್ತೇನೆ ಅಂತ ಹೇಳಿದ್ದಾರೆ. ಜೊತೆಗೆ ಉತ್ತರ ಕೊರಿಯಾದ ಪರಮಾಣು ಶಸ್ತ್ರಾಸ್ತ್ರಗಳು ಡಿಟೆರೆಂಟ್‌ ಅಂದ್ರೆ ಶಸ್ತ್ರುಗಳು ಪರಮಾಣು ದಾಳಿ ಮಾಡದಂತೆ ತಡೆಯಲು ಒಂದರ್ಥದಲ್ಲಿ ನಮ್‌ ಕಡೆನೂ ಪರಮಾಣು ಶಸ್ತ್ರಾಸ್ತ್ರಗಳು ಇವೆ ದಾಳಿ ಮಾಡೋಕೆ ಮುಂಚೆ ಯೋಚ್ನೆ ಮಾಡಿ ಅನ್ನೋ ರೀತಿ ಇದ್ರು ಕೂಡ, ಉತ್ತರ ಕೊರಿಯಾದ ಮೂಲಭೂತ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದ್ರೆ ನಾವೇ ಮೊದಲು ನ್ಯೂಕ್ಲಿಯರ್‌ ವೆಪನ್‌ನ ನಿಯೋಜನೆ ಮಾಡ್ತೇವೆ ಅಂತ ಕಿಮ್‌ ಜಾನ್‌ ಎಚ್ಚರಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾ ಇತ್ತೀಚಗೆ ಪರೀಕ್ಷಿಸಿದ ದೈತ್ಯ ಖಂಡಾಂತರ ಕ್ಷಿಪಣಿ ಹಸಂಗ್‌-17ನನ್ನ ಕೂಡ ಪೆರೇಡ್‌ನಲ್ಲಿ ಪ್ರದರ್ಶಿಸಿದೆ ಅಂತ ಅಲ್ಲಿನ ಸರ್ಕಾರಿ ಮಾ‍ಧ್ಯಮ ಕೆಸಿಎನ್‌ಎ ತಿಳಿಸಿದೆ.

-masthmagaa.com

Contact Us for Advertisement

Leave a Reply