ಉತ್ತರ ಕೊರಿಯಾ: ಕೆ-ಪಾಪ್‌ ವೀಕ್ಷಿಸಿದ್ದಕ್ಕೆ 12 ವರ್ಷಗಳ ಕಠಿಣ ಶಿಕ್ಷೆ!

masthmagaa.com:

ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹೇಳಿದ್ದೇ ನ್ಯಾಯ, ನಡೆದಿದ್ದೇ ದಾರಿ ಅನ್ನೋಕೆ ಇನ್ನೊಂದು ಎಕ್ಸಾಂಪಲ್‌ ಸಿಕ್ಕಿದೆ. ದಕ್ಷಿಣ ಕೊರಿಯಾದ ಕೆ-ಪಾಪ್‌ ಅಥ್ವಾ ಕೊರಿಯನ್-ಪಾಪ್ ವಿಡಿಯೋ ನೋಡಿದ್ರು ಅನ್ನೋ ಸಿಲ್ಲಿ ಕಾರಣಕ್ಕೆ 16 ವರ್ಷದ ಮಕ್ಕಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಈ ಮಕ್ಕಳಿಗೆ 12 ವರ್ಷಗಳ ಕಾಲ ಕಠಿಣ ಶ್ರಮದ ಕೆಲಸ ಶಿಕ್ಷೆಯನ್ನ ವಿಧಿಸಲಾಗಿದೆ ಅಂತ BBC ರಿಪೋರ್ಟ್‌ ಮಾಡಿದೆ. ಅಂದ್ಹಾಗೆ ಕಿಮ್‌ ಅಧಿಕಾರದ ಉತ್ತರ ಕೊರಿಯಾದಲ್ಲಿ ಫಾರೀನ್‌ ಮೂವಿಗಳನ್ನ ನೋಡೋದು, ಹಾಡಗಳನ್ನ ಕೇಳೋದು ಕಾನೂನುಬಾಹಿರ. ಈ ಕೆಲಸ ಮಾಡಿದವ್ರಿಗೆ ಜೈಲು ಶಿಕ್ಷೆ ನೀಡಲಾಗುತ್ತೆ.

-masthmagaa.com

Contact Us for Advertisement

Leave a Reply