ಎಮೋಷನಲ್‌ ಆದ ಉತ್ತರ ಕೊರಿಯಾದ ನಾಯಕ! ಕಿಮ್‌ ಕಣ್ಣೀರಿಡಲು ಕಾರಣವೇನು?

masthmagaa.com:

ರಷ್ಯಾದಲ್ಲಿ ಜನಸಂಖ್ಯೆ ಕಮ್ಮಿಯಾಗಿದೆ ಮಕ್ಕಳನ್ನ ಹೆತ್ತು ಕೊಡಿ ಅಂತ ಪುಟಿನ್‌ ಮಹಿಳೆಯರಲ್ಲಿ ಕೇಳ್ಕೊಂಡ ನಂತರ ಇದೀಗ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌-ಉನ್‌ ಕೂಡ ಅದೇ ರಾಗ ಎತ್ತಿದ್ದಾರೆ. ಉತ್ತರ ಕೊರಿಯಾದಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ, ಪ್ಲೀಸ್‌ ಮಕ್ಕಳನ್ನ ಹೆತ್ತುಕೊಡಿ ಅಂತ ಕಿಮ್‌ ಜಾಂಗ್‌ ಅವ್ರು ಗೊಳೋ ಅಂತ ಅತ್ತಿದ್ದಾರೆ. ಅಲ್ಲಿನ ಈವೆಂಟ್‌ ಒಂದ್ರಲ್ಲಿ ಮಾತನಾಡಿದ ಕಿಮ್‌, ತಾಯಂದಿರ ವಿಚಾರಕ್ಕೆ ಬಂದ್ರೆ ಜನಸಂಖ್ಯೆ ಕಡಿಮೆಯಾಗೋದನ್ನ ತಡೆಯೋದು ಮತ್ತು ಮಕ್ಕಳನ್ನ ಚೆನ್ನಾಗಿ ನೋಡ್ಕೊಳ್ಳೋದು ನಮ್ಮ ದಿನಚರಿಯಾಗ್ಬೇಕು. ದೇಶವನ್ನ ಸ್ಟ್ರಾಂಗ್‌ ಮಾಡೋಕೆ ಪಾತ್ರ ವಹಿಸಿರೋ ತಾಯಂದಿರಿಗೆ ಧನ್ಯವಾದ ಅಂತಾ ಹೇಳಿದ್ದಾರೆ. ಅಲ್ದೇ ದೇಶ ಹಾಗೂ ಪಾರ್ಟಿ ಬಗ್ಗೆ ನಿರ್ಧಾರ ತಗೊಳೋ ಕಷ್ಟದ ಸಮಯದಲ್ಲಿ ನಾನು ಪ್ರತೀ ಬಾರಿ ನನ್ನ ತಾಯಿಯನ್ನ ನೆನಪು ಮಾಡಿಕೊಳ್ತೀನಿ ಅಂತ ಹೇಳಿದ್ದಾರೆ. ಈ ವೇಳೆ ಎಮೋಷನಲ್‌ ಆದ ಕಿಮ್‌ ಈವೆಂಟ್‌ನಲ್ಲೇ ಅತ್ತು ತಮ್ಮ ಕರ್ಚೀಫ್‌ ತೆಗೆದು ಕಣ್ಣು ಒರೆಸಿಕೊಂಡಿರೋ ವಿಡಿಯೋ ಇದೀಗ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply