ಅಮೆರಿಕ ಮಿತ್ರದೇಶಗಳಿಗೆ ಠಕ್ಕರ್‌ ಕೊಡಲು ಕಿಮ್‌ ಜಾಂಗ್‌ ಉನ್‌ ಮಾಡಿದ್ದೇನು?

masthmagaa.com:

ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸೇನಾಭ್ಯಾಸವನ್ನ ಬೆದರಿಕೆ ಅಂತ ಪರಿಗಣಿಸಿರೋ ಉತ್ತರ ಕೊರಿಯಾ ಸರಣಿ ಮಿಸೈಲ್‌ ಲಾಂಚ್‌ ಮಾಡುವ ಮೂಲಕ ಯುದ್ಧಕ್ಕೆ ನಾವು ಸಿದ್ಧರಾಗಿದಿವಿ ಅಂತ ಮೆಸೇಜ್‌ ಕೊಡ್ತಿದೆ. ಇದೀಗ ಸ್ವತಃ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವ್ರು ಎರಡು ದಿನದ ಸೇನಾಭ್ಯಸವನ್ನ ಮುನ್ನಡೆಸಿದ್ರು ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ವೇಳೆ ಪರಮಾಣು ಪ್ರತಿದಾಳಿ ಅನುಕರಣೆ ಸೇರಿದಂತೆ ನ್ಯೂಕ್ಲಿಯಾರ್‌ ವಾರ್‌ಹೆಡ್‌ಗಳನ್ನ ಹೊತ್ತೊಯ್ಯುವ ಮಿಸೈಲ್‌ಗಳ ಫೈರ್‌ ಟೆಸ್ಟ್‌ ಮಾಡಲಾಗಿದೆ. ಈ ಸಮರಾಭ್ಯಾಸದಿಂದ ಸಂತೃಪ್ತರಾಗಿರೋದಾಗಿ ಕಿಮ್‌ ಹೇಳಿದ್ದಾರೆ ಅಂತ ಮಾಧ್ಯಮದಲ್ಲಿ ಉಲ್ಲೇಖಿಸಲಾಗಿದೆ. ಇತ್ತ ಉತ್ತರ ಕೊರಿಯಾದ ಮತ್ತೊಂದು ಶಾರ್ಟ್‌ ರೇಂಜ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಹಾರಿಸಿದ್ದು, ಜಪಾನ್‌ ಸಮುದ್ರಕ್ಕೆ ಬಿದ್ದಿದೆ. ಉತ್ತರ ಕೊರಿಯಾ ಗಂಭೀರವಾಗಿ ನಮ್ಮನ್ನ ಕೆರಳಿಸೊ ಕೆಲಸ ಮಾಡ್ತಿದೆ ಅಂತ ದಕ್ಷಿಣ ಕೊರಿಯಾ ಆರೋಪಿಸಿದೆ. ಅತ್ತ ಉತ್ತರ ಕೊರಿಯಾದ ಮಿಸೈಲ್‌ ಲಾಂಚ್‌ನ್ನ ಜಪಾನ್‌ ಕೂಡ ಖಂಡಿಸಿದೆ.

masthmagaa.com

Contact Us for Advertisement

Leave a Reply