ಯುಕ್ರೇನ್‌ ನೆರವಿಗೆ ನಿಂತ ನಾರ್ವೆ! ಮುಂದಿನ 5 ವರ್ಷಗಳಲ್ಲಿ $7.3 ಬಿಲಿಯನ್‌ ನೆರವು!

masthmagaa.com:

ರಷ್ಯಾ ಆಕ್ರಮಣವನ್ನ ತಮ್ಮ ಮಿತ್ರ ರಾಷ್ಟ್ರಗಳ ಸಹಾಯದಿಂದ ಎದುರಿಸುತ್ತಾ ಬಂದಿರೊ ಯುಕ್ರೇನ್‌ ನೆರವಿಗೆ ನಾರ್ವೆ ಮುಂದಾಗಿದೆ. ಮುಂದಿನ 5 ವರ್ಷಗಳಲ್ಲಿ 7.3 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 59.8 ಸಾವಿರ ಕೋಟಿ ರೂಪಾಯಿಯ ನೆರವು ಕೋಡೋದಾಗಿ ಅನೌನ್ಸ್‌ ಮಾಡಿದೆ. ಜೊತೆಗೆ ರಷ್ಯಾ-ಯುಕ್ರೇನ್‌ ಸಂಘರ್ಷದಿಂದ ಅಫೆಕ್ಟ್‌ ಆಗಿರೊ ಇತರ ದೇಶಗಳಿಗೂ ಹೆಚ್ಚುವರಿ ನೆರವು ನೀಡೋದಾಗಿ ನಾರ್ವೆ ಸರ್ಕಾರ ಹೇಳಿದೆ. ಈ ಪ್ಯಾಕೇಜ್‌ ಮಾನವೀಯ ಹಾಗೂ ಸೇನಾ ನೆರವನ್ನ ಒಳಗೊಂಡಿದೆ ಅಂತ ನಾರ್ವೆ ಪ್ರಧಾನಿ ಜೊನಸ್‌ ಗಹ್ರ್ ಸ್ಟೋರ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಸೋವಿಯತ್‌ ಕಾಲದ ಅಥ್ವಾ ರಷ್ಯಾದಿಂದ ಬಂದಿದ್ದ ಸುಮಾರು 1.9 ಕೋಟಿ ಪುಸ್ತಕಗಳನ್ನ ಯುಕ್ರೇನ್‌ಲ್ಲಿರೊ ಲೈಬ್ರರಿಗಳಿಂದ ಹಿಂಪಡೆಯಲಾಗಿದೆ ಅಂತ ಯುಕ್ರೇನ್‌ನ ಸಚಿವರೊಬ್ರು ಹೇಳಿದ್ದಾರೆ. ಅಲ್ದೇ ಯುಕ್ರೇನ್‌ ದಾಳಿಯನ್ನ ಬೆಂಬಲಿಸಿರೋ ಲೇಖಕರ ಪುಸ್ತಕಗಳನ್ನ ಲೈಬ್ರರಿಗಳಿಂದ ತೆಗೆಯೋಕೆ ಸೂಚಿಸಲಾಗಿದೆ. ಇನ್ನು ಈ ರೀತಿ ಲೈಬ್ರರಿಗಳಿಂದ ಹಿಂಪಡೆದ ಪುಸ್ತಕಗಳನ್ನ ಏನ್‌ ಮಾಡ್ತಾರೆ ಅನ್ನೊದು ತಿಳಿದು ಬಂದಿಲ್ಲ.

-masthmagaa.com

Contact Us for Advertisement

Leave a Reply