ಪ್ಯಾಲೆಸ್ತೀನ್‌ಗೆ ಸ್ಥಾನಮಾನ ನೀಡಲು ಮುಂದಾದ ಯುರೋಪ್‌ ರಾಷ್ಟ್ರಗಳು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಯುರೋಪಿನ 3 ದೇಶಗಳು ಪಾಲೇಸ್ತೀನ್‌ಗೆ ಅಧಿಕೃತ ಸ್ಥಾನಮಾನ ನೀಡೋಕೆ ನಿರ್ಧಾರ ಮಾಡಿವೆ. ಐರ್ಲೆಂಡ್‌, ನಾರ್ವೆ, ಮತ್ತು ಸ್ಪೇನ್‌ ದೇಶಗಳು ಈ ಬಗ್ಗೆ ಮಾಹಿತಿ ಹಂಚಿಕೊಂಡಿವೆ. ಮೇ 28ನೇ ತಾರೀಖು ಪಾಲೇಸ್ತೀನ್‌ನ್ನ ಅಧಿಕೃತ ದೇಶವಾಗಿ ಒಪ್ಪಿಕೊಳ್ಳೋಕೆ ನಾವು ನಿರ್ಧಾರ ಮಾಡಿದ್ದೀವಿ ಅಂತ ಹೇಳಿದ್ದಾರೆ. ಈ ಮೂಲಕ ಯುರೋಪಲ್ಲಿ ಬಹುದೊಡ್ಡ ರಾಜಕೀಯ ಧ್ರುವೀಕರಣ ಆಗೋ ಸೂಚನೆ ಸಿಕ್ತಾ ಇದೆ. ಯಾಕಂದ್ರೆ ಯುರೋಪಿನ ದೇಶಗಳು ನಿಮಗೆಲ್ಲಾ ಗೊತ್ತಿರೋ ಹಾಗೇ ಅಮೆರಿಕದ ದೊಡ್ಡಸ್ಥಿಕೆಯನ್ನ ಒಪ್ಪಿಕೊಂಡು ಅವರ ಜೊತೆಗೆ ಇವೆ. ಅದರಲ್ಲೂ ಈ ನಾರ್ವೆ ಮತ್ತು ಸ್ಪೇನ್‌ ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಗುಂಪಲ್ಲಿ ಇಂಪಾರ್ಟೆಂಟ್‌ ಪಾರ್ಟ್ನರ್..‌ ಇಸ್ರೇಲ್‌ ಜೊತೆಗೂ ಉತ್ತಮ ಸಂಬಂಧ ಹೊಂದಿವೆ. ಅಮೆರಿಕ, ಪಾಲೇಸ್ತೀನ್‌ ಪರ ಅಷ್ಟೆಲ್ಲಾ ಮಾತಾಡಿದ್ರೂ ಅವರು ಪಾಲೇಸ್ತೀನ್‌ಗೆ ಅಧಿಕೃತ ಸ್ಥಾನಮಾನ ಕೊಡೋಕೆ ಒಪ್ಪಿಲ್ಲ. ವಿಶ್ವಸಂಸ್ಥೆಯಲ್ಲಿ ಬಂದ ಎಲ್ಲಾ ಪ್ರಸ್ತಾಪಗಳನ್ನ ವಿಟೋ ಬಳಸಿ ತಡೆ ಹಿಡಿದಿದ್ದಾರೆ. ಇಷ್ಟು ದಿನ ಯುರೋಪಿನ ಬಹುತೇಕ ದೇಶಗಳು ಕೂಡ ಅದೇ ಥರ ಇದ್ವು.. ಆದ್ರೆ ಈಗ ಅಧಿಕೃತವಾಗಿ ನಾವು ಪಾಲೇಸ್ತೀನ್‌ನ ದೇಶವಾಗಿ ನೋಡ್ತೀವಿ ಅಂತ ಅವರು ಹೇಳಿದ್ದಾರೆ. ಇದು ಈಗ ಯುರೋಪ್‌ ಪಾಲಿಟಿಕ್ಸ್‌ನ ಗತಿ ಚೇಂಜ್‌ ಮಾಡ್ಬೋದು ಅಂತೇಳಲಾಗ್ತಿದೆ. ಯಾಕಂದ್ರೆ ರಷ್ಯಾ ಯುಕ್ರೇನ್‌ ಸಂಘರ್ಷದಿಂದಾಗಿಯೇ ಈಗಾಗಲೇ ಮನೆಯೊಂದು ಊರು ತುಂಬಾ ಬಾಗಿಲು ಅಂತ ಯುರೋಪು ಹರಿದು ಹಂಚಿ ಹೋಗ್ತಿದೆ. ಮೊನ್ನೆ ಸ್ಲೋವೇಕಿಯಾ ಪ್ರಧಾನಿ ಹತ್ಯಾ ಪ್ರಯತ್ನದ ಹಿಂದೆ ಅಮೆರಿಕ ಇದೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ಆತ ರಷ್ಯಾ ಪರ ಇದ್ದಾರೆ ಅಂತೇಳಿ ಈ ಥರ ಮಾಡಿದ್ದಾರೆ ಅಂತ . ಸೋ ಈ ನಡುವೆಯೇ ಅಮೆರಿಕದ ಮಿತ್ರ ದೇಶಗಳೇ ಪಾಲೇಸ್ತೀನ್‌ ವಿಚಾರದಲ್ಲಿ ದೊಡ್ಡ ನಿರ್ಧಾರ ಕೈಗೊಂಡಿರೋದು ಮಹತ್ವ ಪಡ್ಕೋತಿದೆ. ಯುರೋಪಲ್ಲಿ ಪಾಲೇಸ್ತೀನ್‌ ಪರ ಪ್ರತಿಭಟನೆಗಳು ಹೆಚ್ಚಾಗ್ತಿರೋದ್ರಿಂದ ಈ ನಿರ್ಧಾರ ತಗೋತಿರಬೋದು ಅಂತ ಹೇಳಲಾಗ್ತಿದೆ. ಆದ್ರೆ ಇದಕ್ಕೆ ಕಾರಣ ಏನು ಅನ್ನೋ ಬಗ್ಗೆ ಅಧಿಕೃತವಾಗಿ ಹೇಳಿಲ್ಲ. ಇನ್ನು ಈ ಬಗ್ಗೆ ಐರ್ಲೆಂಡ್‌ ಪ್ರಧಾನಿ ಮಾತಾಡಿದ್ದಾರೆ. ನಾವು ಇದನ್ನ ರೆಕಗ್ನೈಸ್‌ ಮಾಡ್ತೀವಿ. ಜಗತ್ತು ಕೂಡ ಪಾಲೇಸ್ತೀನನ್ನ ಒಪ್ಪಿಕೊಳ್ಳಬೇಕು ಅಂತೇಳಿದ್ದಾರೆ. ಇತ್ತ ಯುರೋಪಿನ ದೇಶಗಳಿಂದ ಇಂಥದ್ದೊಂದು ನಿರ್ಧಾರ ಹೊರಬರ್ತಿದ್ದಂತೆ ಇಸ್ರೇಲ್‌ ಸಿಡಿದು ನಿಂತಿದೆ. ಇಸ್ರೇಲ್‌ ವಿದೇಶಾಂಗ ಸಚಿವ ಟ್ವೀಟ್‌ ಮಾಡಿದ್ದು, ʻʻ ನಾರ್ವೆ ಮತ್ತು ಐರ್ಲೆಂಡ್‌ ದೇಶಗಳಿಂದ ನಮ್ಮ ರಾಯಭಾರಿಗಳನ್ನ ವಾಪಾಸ್‌ ಪಡ್ಕೋತಿದ್ದೀವಿ. ನಾವು ಈ ಬಗ್ಗೆ ಕ್ಲಿಯರ್‌ ಆಗಿ ಹೇಳ್ತೀವಿ. ಇಸ್ರೇಲ್‌ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಸುಮ್ನಿರಲ್ಲ. ಅವರಿಗೆ ಸ್ವಂತ ದೇಶ ಕೊಡ್ತೀವಿ ಅಂತೇಳಿ ಯಹೂದಿಗಳ ಹತ್ಯಾಕಾಂಡಕ್ಕೆ ನೀವು ಸಪೋರ್ಟ್‌ ಮಾಡಿದ್ದೀರಿ, ಇರಾನ್‌ ಮತ್ತು ಹಮಾಸ್‌ಗಳಿಗೆ ನೀವು ರಿವಾರ್ಡ್‌ ಕೊಟ್ಟಿದ್ದೀರಿ. ಇದರಿಂದ ತಕ್ಕ ಪರಿಣಾಮವನ್ನ ನೀವು ಫೇಸ್‌ ಮಾಡ್ಬಕಾಗುತ್ತೆ. ಐರ್ಲೆಂಡ್‌ ನಾರ್ವೆ ದೇಶಗಳ ಮೂರ್ಖತನದ ನಿರ್ಧಾರ ನಮ್ಮನ್ನ ಸ್ಟಾಪ್‌ ಮಾಡಲ್ಲ. ನಾವು ನಮ್ಮ ಜನರ ರಕ್ಷಣೆ ಮಾಡೇ ಮಾಡ್ತೀವಿ. ಹಮಾಸ್‌ಗಳನ್ನ ನಾಶ ಮಾಡೋದನ್ನ ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ ಅಂತ ಇಸ್ರೇಲ್‌ ಯುರೋಪ್‌ ದೇಶಗಳ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

-masthmagaa.com

Contact Us for Advertisement

Leave a Reply