ನಾರ್ವೆ ಗುಂಡಿನ ದಾಳಿ: ದಾಳಿ ಮಾಡಿದ್ದು ಯಾರು ಗೊತ್ತಾ?

masthmagaa.com:

ನಾರ್ವೆ ರಾಜಧಾನಿ ಒಸ್ಲೋ ನೈಟ್‌ಕ್ಲಬ್‌ನಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯ ಶಂಕಿತನನ್ನು ಇರಾನ್‌ ಮೂಲದ ನಾರ್ವೆ ಪ್ರಜೆ ಅಂತ ಗುರುತಿಸಲಾಗಿದೆ. ಈತ ಅಲ್ಲಿನ ಸ್ಥಳೀಯ ಗುಪ್ತಚರ ಇಲಾಖೆಗೆ ಗೊತ್ತಿದ್ದ ಹಾಗು ಚಾಕು ಮತ್ತು ಮಾದಕವಸ್ತು ಇಟ್ಕೊಂಡಿದ್ಕೆ ಪೋಲಿಸರ ಜೊತೆಗೆ ಒಂದೆರಡು ಬಾರಿ ಸಿಕ್ಕಾಕೊಂಡಿದ್ದ. ನಂತ್ರ ಪೋಲಿಸರು ಬಿಟ್ಟು ಕಳಿಸಿದ್ರು ಅಂತ ಹೇಳಲಾಗಿದೆ. ಅಂದ್ಹಾಗೆ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, 21 ಜನ ಗಾಯಗೊಂಡಿದ್ರು.

-masthmagaa.com

Contact Us for Advertisement

Leave a Reply