ನ್ಯಾಟೋ ಸೇರೋಕೆ ಸ್ವೀಡನ್‌, ಫಿನ್‌ಲ್ಯಾಂಡ್‌ಗೆ ಟರ್ಕಿ ಅಡ್ಡಗಾಲು: ಬೆಂಡೆತ್ತಿದ ಅಮೆರಿಕ

masthmagaa.com:

ಸ್ವೀಡನ್‌, ಫಿನ್‌ಲ್ಯಾಂಡ್‌ ಎರಡೂ ಕೂಡ ನ್ಯಾಟೋ ನೆಲಕ್ಕೆ ಒಂದೊಂದೇ ಹೆಜ್ಜೆ ಇಟ್ಟು ತೆವಳಿಕೊಂಡು ಬರ್ತಿದ್ರೆ ಇತ್ತ ನ್ಯಾಟೋದ ಒಳಗೇ ಇರುವ ಟರ್ಕಿ ಮಾತ್ರ ಇಬ್ಬರ ನಡೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ. ಸ್ವೀಡನ್‌ ಹಾಗೂ ಫಿನ್‌ಲ್ಯಾಂಡ್‌ಗಳು ನ್ಯಾಟೋ ಸೇರೋದು ಸಕಾರಾತ್ಮಕ ಬೆಳವಣಿಗೆ ಅಲ್ಲ. ಈ ಬಗ್ಗೆ ನಮಗೆ ಒಳ್ಳೇ ಅಭಿಪ್ರಾಯ ಇಲ್ಲ ಟರ್ಕಿ ಅಧ್ಯಕ್ಷ ರಿಸಿಪ್‌ ತಯ್ಯಿಪ್‌ ಎರ್ಡೋಗನ್‌ ಹೇಳಿದ್ದಾರೆ. ಅಲ್ದೇ ಈ ಸ್ಕೇಂಡಿನೇವಿಯನ್‌ ದೇಶಗಳು ಭಯೋತ್ಪಾದಕ ಸಂಘಟನೆಗಳಿಗೆ ಗೆಸ್ಟ್‌ಹೌಸ್‌ ರೀತಿ ಆಗೋಗಿದೆ. ಈ ಹಿಂದಿನ ನಾಯಕರು ಗ್ರೀಕ್‌ ಅನ್ನ ನ್ಯಾಟೋ ಗುಂಪಿಗೆ ಸೇರಿಸಿ ತಪ್ಪು ಮಾಡಿದ್ದಾರೆ. ಆದ್ರೆ ಈಗ ನಾವು ಆ ಮಿಸ್ಟೇಕ್‌ ಅನ್ನ ಮತ್ತೆ ಮಾಡೋದಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಟರ್ಕಿಗೆ ನಾರ್ಡಿಕ್‌ ದೇಶಗಳನ್ನ ಕಂಡ್ರೆ ಮುಖ್ಯವಾಗಿ ಸ್ವೀಡನ್‌ ಅಂದ್ರೆ ಮೈಯೆಲ್ಲಾ ಕೆಂಡವಾಗುತ್ತೆ. ಯಾಕಂದ್ರೆ ಟರ್ಕಿಯನ್ನ ಯಾವಾಗ್ಲೂ ಮಗ್ಗುಲ ಮುಳ್ಳಿನಂತೆ ಕಾಡುವ ಕುರ್ದಿಶ್‌ ಬಂಡುಕೋರರಿಗೆ, ಅದರ ನಾಯಕರಿಗೆ ಸ್ವೀಡನ್‌ ಆಶ್ರಯ ನೀಡುತ್ತೆ ಅಂತ. ಇನ್ನು ಟರ್ಕಿಯ ಹೇಳಿಕೆಗೆ ಪ್ರತಿಕ್ರಿಯಿಸಿರೋ ಅಮೆರಿಕ, ಟರ್ಕಿ ಮೊದಲು ಯಾರ್ಕಡೆ ಇದೆ, ಯಾರ ಪರವಾಗಿ ಕೆಲಸ ಮಾಡ್ತಿದೆ ಅಂತ ನಮಗೆ ಸ್ಪಷ್ಟ ಪಡಿಸಬೇಕು ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply