ಮಣಿಪುರ: ಶಸ್ತ್ರಾಸ್ತ್ರ ಹೊಂದಿರೋರಿಗೆ ವಾಪಾಸ್‌ ನೀಡಲು ಆದೇಶ!

masthmagaa.com:

ಲೋಕಸಭಾ ಚುನಾವಣೆ ಸಂಬಂಧ ಮಣಿಪುರದಲ್ಲಿ ಶಸ್ತ್ರಾಸ್ತ್ರ ಹೊಂದಿರೋರಿಗೆ ವಾಪಸ್‌ ನೀಡುವಂತೆ ಆದೇಶಿಸಲಾಗಿದೆ. ಸದ್ಯ ಇದುವರೆಗೆ ಸುಮಾರು 40% ಪರವಾನಗಿ ಪಡೆದ ಶಸ್ತ್ರಾಸ್ತ್ರಗಳು ಪೊಲೀಸ್‌ ಸ್ಟೇಷನ್‌ಗಳಲ್ಲಿ ಡೆಪಾಸಿಟ್‌ ಆಗಿವೆ. ಇನ್ನಾ 60% ವಾಪಸ್ಸಾಗಿಲ್ಲ ಅಂತೇಳಲಾಗಿದೆ. ಇನ್ನು ಮಣಿಪುರದಲ್ಲಿ ಏಪ್ರಿಲ್‌ 19 ಮತ್ತು 26ರಂದು ಚುನಾವಣೆ ನಡೆಯಲಿದೆ. ಅಂದ್ಹಾಗೆ ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಶುರುವಾದಾಗ್ಲಿಂದ ರಕ್ಷಣಾ ತಂಡಗಳ ಕಾರ್ಯಾಚರಣೆ ವೇಲೆ ಹಲವು ಬಾರಿ ಬಹಳಷ್ಟು ಸಂಖ್ಯೆಯಲ್ಲಿ ಆಯುಧಗಳನ್ನ ವಶಪಡಿಸಿಕೊಂಡಿವೆ. ಪರಿಸ್ಥಿತಿ ಇನ್ನೂ ಕಂಪ್ಲೀಟಾಗಿ ತಣ್ಣಗಾಗಿರದ ಕಾರಣ ಅಲ್ಲಿನ ಬುಡಕಟ್ಟು ಗುಂಪುಗಳು ಇನ್ನೂ ಕೂಡ ಆಯುಧಗಳನ್ನ ಇಟ್ಕೊಂಡಿವೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply