ಚೀನಾ ಈಗ ಬದಲಾಗಿದೆ: ಟಿಬೆಟ್‌ ಧರ್ಮಗುರು ದಲೈಲಾಮಾ

masthmagaa.com:

ಟಿಬೆಟ್‌ ಪ್ರತ್ಯೇಕ ರಾಷ್ಟ್ರ ಬೇಕು ಹೀಗಾಗಿ ನಮಗೆ ಸ್ವಾತಂತ್ರ್ಯ ಕೊಡಿ ಅಂತ ನಾವು ಚೀನಾ ಬಳಿ ಕೇಳ್ತಿಲ್ಲ ಎಂದು ಟಿಬೆಟ್‌ ಧರ್ಮಗುರು ದಲೈಲಾಮಾ ಅವ್ರು ಹೇಳಿಕೆ ಕೊಟ್ಟಿದ್ದಾರೆ. ನಾವು ಚೀನಾದ ಭಾಗವಾಗಿನೇ ಇರ್ಬೇಕು ಅಂತ ಹಲವು ವರ್ಷಗಳ ಹಿಂದೆನೇ ಡಿಸೈಡ್‌ ಮಾಡಿದಿವಿ. ಜೊತೆಗೆ ಚೀನಾ ಈಗ ಬದ್ಲಾಗುತ್ತಿದ್ದು, ನನ್ನನ್ನು ಸಂಪರ್ಕಿಸೋಕೆ ಪ್ರಯತ್ನ ಮಾಡ್ತಿದೆ. ಚೀನಾದ ಜೊತೆಯಲ್ಲಿ ಮುಕ್ತವಾಗಿ ಮಾತುಕತೆ ನಡೆಸಲು ನಾನು ಯಾವಾಗಲೂ ರೆಡಿ ಇದೀನಿ. ಅಲ್ದೆ ಟಿಬೆಟ್‌ ಜನರ ಆತ್ಮಸ್ಥೈರ್ಯ ಎಷ್ಟು ಸ್ಟ್ರಾಂಗ್‌ ಇದೆ ಅನ್ನೋದನ್ನ ಚೀನಾ ಕೂಡ ಅರ್ಥ ಮಾಡಿಕೊಂಡಿದೆ. ಈ ಹಿನ್ನಲೆಯಲ್ಲಿ ಟಿಬೆಟ್‌ ಜನ್ರ ಪ್ರಾಬ್ಲಂಗಳನ್ನ ಪರಿಹರಿಸೋಕೆ ಚೀನಾ ನನ್ನನ್ನು ಕಾಂಟ್ಯಾಕ್ಟ್‌ ಮಾಡೋಕೆ ಟ್ರೈ ಮಾಡ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply