ಭಾರತದ ಮಾಜಿ ಗುಪ್ತಚರನಿಂದ ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ! ಏನಿದು ಹೊಸ ಲೆಕ್ಕಚಾರ?

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಜೇಮ್ಸ್‌ ಬಾಂಡ್‌ ಖ್ಯಾತಿಯ ಮಾಜಿ ಗುಪ್ತಚರ, ಸಧ್ಯ ಭಾರತದ ಭದ್ರತಾ ಸಲಹೆಗಾರರೂ ಆಗಿರೋ ಅಜಿತ್‌ ಧೋವಲ್‌ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನ ಭೇಟಿಯಾಗಿದ್ದಾರೆ. ಪ್ರಾದೇಶಿಕ ಸಮಸ್ಯೆಗಳು, ಎರಡು ದೇಶಗಳ ನಡುವೆ ಇರೋ ದ್ವಿಪಕ್ಷೀಯ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಾಗಿದೆ ಅಂತ ರಷ್ಯಾದಲ್ಲಿರೋ ಭಾರತದ ರಾಯಭಾರ ಕಚೇರಿ ಮಾಹಿತಿ ಹಂಚಿಕೊಂಡಿದೆ. ಯುಕ್ರೇನ್‌ ಯುದ್ದದ ಕಾರಣದಿಂದ ರಷ್ಯಾ ಮೇಲೆ ಅಮೆರಿಕ ಹಾಗೂ ಮಿತ್ರರು ನಿರ್ಬಂಧ ಹೇರೋದನ್ನ ಕಂಟಿನ್ಯೂ ಮಾಡಿರೋ ಹೊತ್ತಲ್ಲೇ ಭಾರತದ ಅತ್ಯುನ್ನತ ಅಧಿಕಾರಿಯೊಬ್ರು ರಷ್ಯಾಗೆ ಭೇಟಿ ನೀಡಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅದ್ರಲ್ಲೂ ಅಜಿತ್‌ ದೋವಲ್‌ ಪುಟಿನ್‌ರನ್ನ ಭೇಟಿಯಾಗಿರೋದು ಮತ್ತೂ ಕುತೂಹಲ ಕೆರಳಿಸಿದೆ. ಯಾಕಂದ್ರೆ ಇತ್ತೀಚಿಗೆ ತಾನೇ ಅಮೆರಿಕಗೆ ಭೇಟಿ ಕೊಟ್ಟಿದ್ದ ಅಜಿತ್‌ ಧೋವಲ್‌, ಭಾರತದ ರಕ್ಷಣಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟಂತೆ ಅಮೆರಿಕದ ನಾಯಕರ ಜೊತೆಗೆ ಇಂಪಾರ್ಟೆಟ್‌ ಮೀಟಿಂಗ್‌ ಮಾಡಿದ್ರು. ಅಷ್ಟೇ ಅಲ್ಲ ಅಮೆರಿಕದ ಬಲಿಷ್ಠ ಅಸ್ತ್ರಗಳನ್ನ ಭಾರತಕ್ಕೆ ಕೊಡುವ ಬಗ್ಗೆ ಕೂಡ ಚರ್ಚೆಯಾಗಿತ್ತು. ಭಾರತದಲ್ಲಿ ತಯಾರಾಗುವ ಫೈಟರ್‌ ಜೆಟ್‌ಗಳಿಗೆ ಅಮೆರಿಕ ಇಂಜಿನ್‌ ತಂತ್ರಜ್ಞಾನವನ್ನ ಕೊಡುವ ಮಹತ್ವದ ಮಾತುಕತೆಯೂ ನಡೆದಿತ್ತು. ಇದರ ಬೆನ್ನಲ್ಲೇ ಈಗ ಅಫ್ಘಾನಿಸ್ತಾನದ ಬಗ್ಗೆ ಮಾತನಾಡೋಕೆ ಅಂತ ರಷ್ಯಾ ಆಯೋಜನೆ ಮಾಡಿದ್ದ ಸಭೆಯಲ್ಲಿ ದೋವಲ್‌ ಭಾಗವಹಿಸಿ, ನಂತರ ರಷ್ಯಾ ಪ್ರೆಸಿಡೆಂಟ್‌ ಪುಟಿನ್‌ ಜೊತೆಗೂ ಮೀಟಿಂಗ್‌ ಮಾಡಿದ್ದಾರೆ. ರಷ್ಯಾ ಹಾಗೂ ಭಾರತದ ನಡುವಿನ ಸಂಬಂಧವನ್ನ ಮತ್ತಷ್ಟು ವಿಸ್ತರಣೆ ಮಾಡುವುದರ ಜೊತೆಗೆ ಇಬ್ರ ನಡುವೆ ಇರೋ ಸಮಸ್ಯೆಗಳ ಕುರಿತಂತೆ ಇಬ್ರೂ ಚರ್ಚೆ ಮಾಡಿದ್ದಾರೆ ಅಂತ ಸರ್ಕಾರ ಹೇಳಿದೆ. ಅಜಿತ್‌ ದೋವಲ್‌ ಅವರ ಈ ಭೇಟಿಯ ಹಿಂದೆ ಸಾಕಷ್ಟು ಅಜೆಂಡಾಗಳಿವೆ ಅಂತ ತಜ್ಞರು ಲೆಕ್ಕಚಾರ ಮಾಡ್ತಿದ್ದಾರೆ. ಯುಕ್ರೇನ್‌ ಯುದ್ದದ ನಂತರ ಇಂಧನ ಅದು ಇದು ಅಂತ ಪಾಕಿಸ್ತಾನ ರಷ್ಯಾ ಪರ ವಾಲ್ತಾ ಇದ್ದು ಅಮೆರಿಕವನ್ನ ದೂರ ಇಟ್ಕೊಂಡು ಬರ್ತಿದೆ. ಅಲ್ದೇ ಅಮೆರಿಕ ಹಾಗೂ ಭಾರತದ ಸಂಬಂಧ ಕೂಡ ಇತ್ತೀಚಿಗೆ ಗಟ್ಟಿಗೊಳ್ತಿದೆ. ಇದನ್ನ ಗಮನಿಸ್ತಿರೋ ರಷ್ಯಾ, ಪಾಕಿಸ್ತಾನವನ್ನ ಹತ್ರಕ್ಕೆ ಸೇರಿಸಿಕೊಳ್ತಾ ಭಾರತಕ್ಕೆ ಮೆಸೇಜ್‌ ಕೋಡೋ ತರ ಮಾಡ್ತಿದೆ. ಅಲ್ದೇ ಚೀನಾ ಜೊತೆಗೂ ರಷ್ಯಾ ತುಂಬಾ ಕ್ಲೋಸ್‌ ಆಗಿದ್ದು ಈ ಎರಡೂ ಭಾರತದ ಶತ್ರುಗಳ ಜೊತೆಗೆ ತನ್ನ ಸಂಬಂಧವನ್ನ ಗಟ್ಟಿ ಮಾಡಿಕೊಳ್ತಿದೆ. ಇದರ ಭಾಗವಾಗಿ ಕಳೆದ ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ವಿದೇಶಾಂಗ ಸಚಿವ ಭಿಲಾವಲ್‌ ಭುಟ್ಟೋ ಜರ್ಧಾರಿ ರಷ್ಯಾಗೆ ಭೇಟಿ ಕೊಟ್ಟು ಅಲ್ಲಿನ ವಿದೇಶಾಂಗ ಸಚಿವರ ಹತ್ರ ಮಾತನಾಡಿದ್ರು. ಇದ್ರ ಬೆನ್ನಲ್ಲೇ ಈಗ ಅಜಿತ್‌ ದೋವಲ್‌ ರಷ್ಯಾಗೆ ಭೇಟಿ ಕೊಟ್ಟು ನೇರವಾಗಿ ಪುಟಿನ್‌ ಜೊತೆಗೆ ಮಾತನಾಡಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನು ಮಾರ್ಚ್‌ ಆರಂಭದಲ್ಲಿ ದೆಹಲಿಯಲ್ಲಿ ಜಿ20 ದೇಶಗಳ ವಿದೇಶಾಂಗ ಸಚಿವರ ಸಭೆ ಇರಲಿದ್ದು ರಷ್ಯಾದ ಫಾರಿನ್‌ ಮಿನಿಸ್ಟರ್‌ ಸರ್ಗೇ ಲಾವ್ರೋವ್‌ ಕೂಡ ಮಾರ್ಚ್‌ 1 ಹಾಗೂ 2ನೇ ತಾರೀಖು ಭಾರತಕ್ಕೆ ಬರುವ ನಿರೀಕ್ಷೆ ಇದೆ.

-masthmagaa.com

Contact Us for Advertisement

Leave a Reply