ಆಟೋಮೊಬೈಲ್‌ ಕ್ಷೇತ್ರಕ್ಕೆ ಕಾಲಿಟ್ಟ ಸ್ಟೀಲ್‌ ಕಿಂಗ್‌ JSW ಗ್ರೂಪ್‌!

masthmagaa.com:

ಓಡಿಶಾ ಸರ್ಕಾರದ ಜೊತೆಗೆ JSW ಗ್ರೂಪ್‌ ದೊಡ್ಡ ಇವಿ ಒಪ್ಪಂದ ಒಂದಕ್ಕೆ ಕೈ ಹಾಕಿದೆ. ಕಟಕ್‌ ಮತ್ತು ಪಾರಾದಿಪ್‌ಗಳಲ್ಲಿ ಎಲೆಕ್ಟ್ರಿಕ್‌ ವಾಹನ ಹಾಗು ಬ್ಯಾಟರಿ ಮ್ಯಾನುಫ್ಯಾಕ್ಚರಿಂಗ್‌ ಘಟಕ ತೆರೆಯೋದಾಗಿ ಘೋಷಿಸಿದೆ. ಇದಕ್ಕಾಗಿ 40 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ನವೀನ್‌ ಪಟ್ನಾಯಕ್‌ ಸರ್ಕಾರದ ಜೊತೆಗೆ ಒಪ್ಪಂದ ಮಾಡ್ಕೊಂಡಿದೆ. ಈ ಮೂಲಕ ಸ್ಟೀಲ್‌ ಕಿಂಗ್‌ ಕಂಪನಿ ಆಟೋಮೊಬೈಲ್‌ ಕ್ಷೇತ್ರಕ್ಕೆ ಎಂಟ್ರಿ ಕೊಡೋಕೆ ತಯಾರಾಗಿದೆ. ಅಂದ್ಹಾಗೆ ಈಗಾಗಲೇ JSW, MG ಮೋಟಾರ್‌ನ ಮಾತೃ ಸಂಸ್ಥೆ SAIC ಮೊಟಾರ್‌ ಜೊತೆಗೆ ಜಾಯಿಂಟ್‌ ವೆಂಚರ್‌ನ್ನ ಅನೌನ್ಸ್‌ ಮಾಡಿತ್ತು. ಆ ಜಾಯಿಂಟ್‌ ವೆಂಚರ್‌ನಲ್ಲಿ 35% ಪಾಲುದಾರಿಕೆ ಹೊಂದೋದಾಗಿ ಹೇಳಿತ್ತು. ಆದ್ರೆ ಈಗ ನೇರವಾಗಿ ತಾನೇ ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆಗೆ ಕೈ ಹಾಕಿದೆ. ಹಲವಾರು ರಾಜ್ಯಗಳ ಆಯ್ಕೆ JSW ಮುಂದೆ ಇತ್ತು, ಆದ್ರೆ JSW ಗುಜರಾತ್‌ ತಮಿಳುನಾಡು ರೀತಿ ವಾಹನ ತಯಾರಿಕೆ ವಾತಾವರಣ ಇಲ್ಲದ ಓಡಿಶಾವನ್ನ ಆಯ್ಕೆ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply