ಕೆಂಪು ಸಮುದ್ರ ಕ್ರೈಸಿಸ್: ಜಾಗತಿಕ ಮಾರ್ಕೆಟ್‌ನಲ್ಲಿ ತೈಲ ದರ ಏರಿಕೆ

masthmagaa.com:

ಕೆಂಪು ಸಮುದ್ರದಲ್ಲಿನ ಉದ್ವಿಗ್ನತೆಯಿಂದ ಮತ್ತೆ ತೈಲ ದರ ಏರಿಕೆ ಬಿಸಿ ತಟ್ಟುತ್ತಿದೆ. ಇಷ್ಟು ದಿನ ಕೆಂಪು ಸಮುದ್ರದಲ್ಲಿ ಸಾಗಾಣಿಕೆ ಹಡಗುಗಳ ಮೇಲೆ ಹೌತಿಗಳು ದಾಳಿ ಮಾಡಿ, ದೇಶಗಳಿಗೆ ತಲೆನೋವು ಉಂಟುಮಾಡ್ತಿದ್ರು. ಇದ್ರಿಂದ ರಫ್ತು, ಆಮದಿಗೆ ಅಡ್ಡಿ ಉಂಟಾಗಿ, ಜಾಗತಿಕ ಮಾರ್ಕೆಟ್‌ ಮೇಲೆ ಪರಿಣಾಮ ಬೀರಿತ್ತು. ಇದೀಗ ಹೌತಿಗಳಿಗೆ ಬುದ್ದಿ ಕಲಿಸೋಕೆ ಅಮೆರಿಕ ಹಾಗೂ ಯುಕೆ ಜೊತೆಯಾಗಿ ಯೆಮೆನಲ್ಲಿರೊ ಹೌತಿಗಳ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಜಾಗತಿಕ ಮಾರ್ಕೆಟ್‌ನಲ್ಲಿ ತೈಲ ಬೆಲೆ ಏರಿಕೆ ಬಿಸಿ ತಟ್ಟಿದೆ. ಆಯಿಲ್‌ ಟ್ಯಾಂಕರ್‌ಗಳು ರೆಡ್‌ ಸೀ ಬಿಟ್ಟು ಬೇರೆ ಮಾರ್ಗವನ್ನ ಆಯ್ಕೆ ಮಾಡಿದ್ದು, ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ ಕ್ರ್ಯೂಡ್‌ ಆಯಿಲ್‌ 1.15%ನಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 72.85 ಡಾಲರ್‌ ಆಗಿದೆ. ಬ್ರೆಂಟ್‌ ಕ್ರ್ಯೂಡ್‌ ಆಯಿಲ್‌ನಲ್ಲಿ 1.13% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 78.31 ರೂಪಾಯಿ ಆಗಿದೆ. ಅಲ್ದೇ ಈ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇಂಟರ್‌ಮಿಡಿಯೇಟ್‌ ಕ್ರ್ಯೂಡ್‌ ಆಯಿಲ್‌ 75 ಡಾಲರ್‌ ಕ್ರಾಸ್‌ ಆಗಬಹುದು ಹಾಗೇ ಬ್ರೆಂಟ್‌ ಆಯಿಲ್ 80 ಡಾಲರ್‌ ಕ್ರಾಸ್‌ ಆಗುವ ಚಾನ್ಸಸ್‌ ಇದೆ ಅಂತ ಮಾರ್ಕೆಟ್‌ ತಜ್ಞರು ಹೇಳಿದ್ದಾರೆ. ಅಂದ್ಹಾಗೆ ಈ ವಾರದ ಆರಂಭದಲ್ಲಿ ಹೌತಿಗಳು ರೆಡ್‌ ಸೀಯಲ್ಲಿ ಶಿಪ್‌ಮೆಂಟ್‌ಗಳ ಮೇಲೆ ಅತಿದೊಡ್ಡ ಅಟ್ಯಾಕ್‌ ಮಾಡಿದ್ರು. ಇದ್ರಿಂದ ಅಮೆರಿಕ ಗಂಭೀರ ಎಚ್ಚರಿಕೆಗಳನ್ನ ನೀಡಿತ್ತು. ಇದರ ಬೆನ್ನಲ್ಲೇ ಇರಾನ್‌ ಓಮನ್‌ನ ಕಡಲ ತೀರದಲ್ಲಿ ಆಯಿಲ್‌ ಟ್ಯಾಂಕರ್‌ನ್ನ ಸೀಜ್‌ ಮಾಡಿತ್ತು. ಈ ಉದ್ವಿಗ್ನತೆಯಿಂದ ಟ್ಯಾಂಕರ್‌ ಕಂಪನಿಗಳಾದ ಸ್ಟೆನಾ ಬಲ್ಕ್‌, ಹಫಿನಾ ಹಾಗೂ ಟಾರ್ಮ್‌ ಸೇರಿದಂತೆ ಇತರ ಕಂಪನಿಗಳು ರೆಡ್‌ ಸೀ ಮಾರ್ಗವಾಗಿ ಹೋಗುವ ಹಡಗುಗಳನ್ನ ಹಾಲ್ಟ್‌ ಮಾಡಿವೆ. ಸೋ ಈ ರೀತಿ ಆಯಿಲ್‌ ಟ್ಯಾಂಕರ್‌ಗಳ ಸೀಜ್‌ನಿಂದ, ಶಿಪ್‌ಮೆಂಟ್‌ಗಳಿಗೆ ಉಂಟಾಗ್ತಿರೊ ಅಡೆತಡೆಗಳಿಂದ ಆಯಿಲ್‌ ಬೆಲೆ ಜಾಸ್ತಿಯಾಗ್ತಿದೆ.

-masthmagaa.com

Contact Us for Advertisement

Leave a Reply