ಗಗನಕ್ಕೇರಲಿದೆ ಪೆಟ್ರೋಲ್‌, ಡೀಸೆಲ್‌ ದರ!

masthmagaa.com:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಬ್ಯಾರೆಲ್‌ಗೆ 95.67 ಡಾಲರ್‌ ಅಂದ್ರೆ ಸುಮಾರು 7,845 ರೂಪಾಯಿ ದಾಟಿದೆ. ಇದರಿಂದ ಭಾರತ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಹಣದುಬ್ಬರದ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇದೆ ಅಂತ ಅಂದಾಜು ಮಾಡಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯಾಗುವ ಲಕ್ಷಣಗಳೂ ಇವೆ. ಇನ್ನು ಭಾರತದಲ್ಲಿ ಚುನಾವಣೆ ವರ್ಷವಾದ ಕಾರಣ, ವರ್ಷಾಂತ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಈಗಿನ ಪರಿಸ್ಥಿತಿ ಹೀಗೆಯೇ ಕಂಟಿನ್ಯೂ ಆದ್ರೆ ದರ ಇಳಿಕೆಯ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ. ಜನವರಿಯಿಂದ ಈಚೆಗೆ ತೈಲ ದರ ಶೇ. 30ರಷ್ಟು ಏರಿಕೆಯಾಗಿದೆ. ನಿನ್ನೆ ಕೂಡ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಏರಿಕೆಯ ವಹಿವಾಟು ಕಂಡು ಬಂದಿದ್ದು, ಬ್ಯಾರೆಲ್‌ಗೆ 95 ಡಾಲರ್‌ ಗಡಿ ದಾಟಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಕಚ್ಚಾ ತೈಲದ ದರ ಸದ್ಯದಲ್ಲೇ 100 ಡಾಲರ್‌ಗೆ ಮುಟ್ಟುವ ಸಾಧ್ಯತೆಗಳಿವೆ. ಹೀಗಾದಲ್ಲಿ ಇದು ಪೆಟ್ರೋಲ್‌, ಡೀಸೆಲ್‌ ದರದ ಮೇಲೆ ಪರಿಣಾಮ ಬೀರಲಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply