ಕೆನಡಾ-ಭಾರತ ನಡುವಿನ ಬಿಕ್ಕಟ್ಟು ಆದಷ್ಟು ಬೇಗ ಕಡಿಮೆಯಾಗ್ಬೇಕು: ಸುನಾಕ್‌

masthmagaa.com:

ಖಲಿಸ್ತಾನಿ ವಿಚಾರಕ್ಕೆ ಭಾರತ ಮತ್ತು ಕೆನಡಾ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಕಂಟಿನ್ಯೂ ಆಗಿದೆ. ಇದರ ಭಾಗವಾಗಿ ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕ ಅಧಿಕಾರಗಳನ್ನ ಕೆನಡಾ ಸ್ಥಳಾಂತರ ಮಾಡಿದೆ. ಈ ಹಿನ್ನಲೆಯಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅವರು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಅವ್ರಿಗೆ ಕಾಲ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದಲ್ಲಿ ಸದ್ಯ ಕೆನಡಾ ರಾಜತಾಂತ್ರಿಕ ಅಧಿಕಾರಿಗಳ ವಿಚಾರದಲ್ಲಿ ಆಗಿರೋ ಬೆಳವಣಿಗೆ ಕುರಿತು ಟ್ರುಡು ಮಾಹಿತಿ ನೀಡಿದ್ದಾರೆ ಅಂತ ಸುನಾಕ್‌ರ ಅಧಿಕೃತ ನಿವಾಸ ಡೌನಿಂಗ್‌ ಸ್ಟ್ರೀಟ್‌ ಹೇಳಿಕೆ ಬಿಡುಗಡೆ ಮಾಡಿದೆ. ಜೊತೆಗೆ ಎಲ್ಲಾ ದೇಶಗಳು ಮತ್ತೊಂದು ದೇಶದ ಸಾರ್ವಭೌಮತ್ವವನ್ನ ಗೌರವಿಸಬೇಕು ಅಂತ ಸುನಾಕ್‌ ಮತ್ತೊಮ್ಮೆ ಪುನರುಚ್ಛಾರ ಮಾಡಿದ್ದಾರೆ. ಅಷ್ಟೆ ಅಲ್ದೆ ಈ ರಾಜತಾಂತ್ರಿಕ ಬಿಕ್ಕಟ್ಟು ಆದಷ್ಟು ಕಡಿಮೆಯಾಗುವ ಭರವಸೆ ವ್ಯಕ್ತಪಡಿಸಿರುವ ಸುನಾಕ್‌, ಮುಂದಿನ ಹಂತಗಳಲ್ಲಿ ಟ್ರುಡು ಅವರ ಜೊತೆ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಅಂತ ಹೇಳಿಕೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply