ಸಿನಿಮಾಗಳ ಬಗ್ಗೆ ಅನಗತ್ಯ ಚರ್ಚೆ ಮಾಡೋದನ್ನ ಬಿಡಿ ಎಂದ ಮೋದಿ! ಯಾಕೆ?

masthmagaa.com:

ಸಿನಿಮಾಗಳಂತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನ ಮಾಡದಂತೆ ಪ್ರಧಾನಿ ಮೋದಿ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮದ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಪ್ರಧಾನಿ ಮೋದಿ ಅವ್ರ ಪ್ರತಿಯೊಂದು ಮಾತು ಮತ್ತು ವಾಕ್ಯ ನಮಗೆ ಮುಖ್ಯವಾಗಿದೆ ಅಂತ ಹೇಳಿದ್ದಾರೆ. ಇತ್ತೀಚೆಗೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟಿಸಿರೋ ಪಠಾಣ್‌ ಚಿತ್ರದ ಬಗ್ಗೆ ನರೋತ್ತಮ್‌ ಮಿಶ್ರಾ ತೀವ್ರ ಆಕ್ರೋಶ ಹೊರಹಾಕ್ತಿದ್ರು. ಚಿತ್ರವನ್ನ ಬಹಿಷ್ಕಾರ ಮಾಡೋದಕ್ಕೂ ಆಗ್ರಹ ಮಾಡಿದ್ರು. ಚಿತ್ರ ಬಿಡುಗಡೆ ಮಾಡೋದಕ್ಕೆ ಅವಕಾಶ ಕೊಡಲ್ಲ ಅಂತ ಕೂಡ ಹೇಳಿದ್ರು. ಇವರ ಜೊತೆಗೆ ದೇಶದ ಅನೇಕ ಬಿಜೆಪಿ ಮುಖಂಡರು ಈ ಪಠಾಣ್‌ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಇದ್ರ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ, ಬಿಜೆಪಿಯವರಿಗೆ ಸಿನಿಮಾದಂತಹ ವಿಚಾರಗಳ ಬಗ್ಗೆ ಯಾರೂ ಟೀಕೆ ಮಾಡಬಾರದು ಅಂತ ಎಚ್ಚರಿಕೆ ಕೊಟ್ಟಿದಾರೆ.

-masthmagaa.com

Contact Us for Advertisement

Leave a Reply