PM ಮೋದಿಗೆ ರಾಖಿ ಕಟ್ಟಲು ಪಾಕಿಸ್ತಾನದಿಂದ ಬಂದ ಸಹೋದರಿ! ಯಾರದು?

masthmagaa.com:

ಪ್ರತಿವರ್ಷದಂತೆ ಈ ಬಾರಿಯೂ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ಮಹಿಳೆ ಖಮರ್‌ ಮೊಕ್ಸಿನ್ ಶೇಖ್ ಅನ್ನೋರು ದೆಹಲಿಗೆ ಆಗಮಿಸಿ ರಾಖಿ ಕಟ್ಟಲಿದ್ದಾರೆ. ಕೋವಿಡ್ ಕಾರಣದಿಂದ ಕಳೆದ 2-3 ವರ್ಷಗಳಿಂದ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಈ ವರ್ಷ ನಾನು ನನ್ನ ಕೈಯಾರೆ ತಯಾರಿಸಿದ ರಾಖಿ ಹಾಗೂ ಕೃಷಿ ಸಂಬಂಧಿ ಪುಸ್ತಕದೊಂದಿಗೆ ದೆಹಲಿಗೆ ತೆರಳಲಿದ್ದೇನೆ ಅಂತ ಖಮರ್ ಹೇಳಿದ್ದಾರೆ. ಅಂದ್ಹಾಗೆ ಖಮರ್‌ ಅವ್ರು ಗುಜರಾತ್‌ನ ಅಹಮದಾಬಾದ್‌ ಮೂಲದವರಾಗಿದ್ದು, ಮದುವೆ ಬಳಿಕ ಪಾಕಿಸ್ತಾನದಲ್ಲಿ ವಾಸವಿದ್ದಾರೆ. ಕಳೆದ 30 ವರ್ಷಗಳಿಂದ ಮೋದಿಯವರಿಗೆ ರಾಖಿ ಕಟ್ಟುತ್ತಾ ಬಂದಿದ್ದಾರೆ.

-masthmagaa.com

Contact Us for Advertisement

Leave a Reply