ಎರಡನೇ ದಿನವೇ ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಜಗಳ!

masthmagaa.com:

ಸಾಮಾನ್ಯವಾಗಿ ಬಿಗ್‌ಬಾಸ್‌ ಶುರುವಾದ ಮೊದಲ ವಾರ ಎಲ್ಲರೂ ಎಲ್ಲವೂ ಚೆನ್ನಾಗೇ ಇರತ್ತೆ. ಹೋಗ್ತಾ ಹೋಗ್ತಾ ಮನಸ್ತಾಪಗಳು, ಕೋಳಿ ಜಗಳಗಳು ಶುರುವಾಗತ್ತೆ. ಆದ್ರೆ 10ನೇ ಸೀಸನ್‌ನಲ್ಲಿ ಬಿಗ್‌ಬಾಸ್‌ ಶುರುವಾದ ಎರಡೇ ದಿನಕ್ಕೆ ಜಗಳಗಳು ಸಹ ಶುರುವಾಗಿದೆ.

ಬಿಗ್‌ಬಾಸ್‌ಮನೆಯಲ್ಲಿ ಎಲಿಮಿನೇಷನ್‌ ಪ್ರೊಸಿಜರ್‌ ಶುರುವಾಗಿದೆ. ಈ ಎಲಿಮಿನೇಷನ್‌ನಲ್ಲಿ ವಿನಯ್‌ ಗೌಡ, ಸಂಗೀತಾ ಅವರನ್ನ ಎಲಿಮಿನೇಟ್‌ ಮಾಡ್ತಾರೆ. ಸಂಗೀತಾ ಸೋಫಾ ಮೇಲೆ ಕುಳಿತುಕೊಂಡ್ರು. ಇದು ಬಿಗ್‌ಬಾಸ್‌ ರೂಲ್ಸ್‌ ಅನ್ನ ಬ್ರೇಕ್‌ ಮಾಡಿದ ಹಾಗೇ ಆಯ್ತು. ಅದಿಕ್ಕೆ ನಾನು ಸಂಗೀತಾ ಶೃಂಗೇರಿ ಅವರನ್ನ ಎಲಿಮಿನೇಟ್‌ ಮಾಡ್ತೀನಿ ಅಂತ ಹೇಳಿದ್ರು.

ಸಂಗೀತಾ ಶೃಂಗೇರಿ ಅವರಿಗೆ ವಿನಯ್‌ ಗೌಡ ಅವರು ಈ ರೀತಿ ಹೇಳಿದ್ದು ಇಷ್ಟ ಆಗಿಲ್ಲ. ಇದೇ ವಿಷಯಕ್ಕೆ ಮನೇಲಿ ಜಗಳ ಕೂಡ ಆಗಿದೆ. ಬಿಗ್‌ಬಾಸ್‌ಗೆ ಬಂದಿರೋ 6 ಜನ ಕಂಟೆಸ್ಟಂಟ್‌ಗಳಿಗೆ 1 ವಾರದ ಗಡುವನ್ನ ಬಿಗ್‌ಬಾಸ್‌ ಕೊಟ್ಟಿದ್ದಾರೆ. ಯಾರು ಬೆಸ್ಟ್‌ ಫರ್ಫಾರ್ಮರ್‌ ಆಗ್ತಾರೋ ಅವರು ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೋಳ್ತಾರೆ. ಇಲ್ಲಾ ಅಂದ್ರೆ 1 ವಾರ ಆದಮೇಲೆ ತಮ್ಮ ಮನೆಗೆ ವಾಪಸ್‌ ಹೋಗಬೇಕಾಗತ್ತೆ. ಸೋ ಈ ರೂಲ್ಸ್‌ ಪ್ರಕಾರ ಆ ಆರು ಜನ ಅಂದ್ರೆ ಸಂಗೀತಾ ಶೃಂಗೇರಿ, ರಕ್ಷಕ್‌, ತನಿಶಾ, ಕಾರ್ತೀಕ್‌, ಡ್ರೋನ್‌ ಪ್ರತಾಪ್‌, ಸಂತೋಷ್‌ ಇವರುಗಳು ಬಿಗ್‌ಬಾಸ್‌ ಮನೆಯ ಸೋಫಾ ಮೇಲಾಗ್ಲಿ, ಬೆಡ್‌ ಮೇಲಾಗ್ಲಿ ಕುಳಿದುಕೊಳ್ಳೊ ಹಾಗಿಲ್ಲ. ಕೇವಲ ನೆಲದ ಮೇಲೆ ಕುಳಿತುಕೊಳ್ಳಬೇಕು. ಆದ್ರೆ ಸಂಗೀತಾ ಅವರು ಸೋಫಾ ಮೇಲೆ ಕುಳಿತುಕೋಳ್ತಾರೆ. ಸೋ ಇದೇ ವಿಷಯಕ್ಕೆ ಈಗ ಜಗಳ ಕೂಡ ಆಗಿದೆ.

https://www.instagram.com/reel/CyM7Ik6M0MO/?utm_source=ig_web_copy_link

ಸೋ ಬಿಗ್‌ಬಾಸ್‌ನ 24 ಗಂಟೆಗಳ ಲೈವ್‌ ಅನ್ನ ನೀವು ಜಿಯೋ ಸಿನಿಮಾದಲ್ಲಿ ಫ್ರೀ ಆಗಿ ನೋಡಬಹುದು.

-masthmagaa.com

Contact Us for Advertisement

Leave a Reply