ರಷ್ಯಾನ ಒಬ್ಬಂಟಿ ಮಾಡೋಕಾಗಲ್ಲ: ಪುಟಿನ್‌

masthmagaa.com:

ರಷ್ಯಾದ ರಕ್ಷಣೆಯನ್ನ ಗಮನದಲ್ಲಿ ಇಟ್ಕೊಂಡು ಯುಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಮಾಡಲಾಗ್ತಾ ಇದ್ದು, ಸದ್ಯದಲ್ಲೇ ನಮ್ಮ ಗುರಿ ತಲುಪ್ತೀವಿ ಅಂತ ರಷ್ಯಾ ಅಧ್ಯಕ್ಷ ಪುಟಿನ್‌ ಹೇಳಿದ್ದಾರೆ. ವೊಸ್ಟೋಚ್ನಿಯ ರಾಕೆಟ್‌ ಉಡಾವಣಾ ಕೇಂದ್ರಕ್ಕೆ ಆಗಮಿಸಿ ಮಾತಾಡಿರೋ ಅವ್ರು, ರಷ್ಯಾ ವಿರೋಧಿ ಚಟುವಟಿಕೆಗಳಿಗೆ ಯುಕ್ರೇನ್‌ ಒಂದು ಬ್ರಿಡ್ಜ್‌ ಆಗಿತ್ತು. ಅಲ್ಲಿ ರಾಷ್ಟ್ರೀಯತೆ ಮತ್ತು ಹೊಸ ನಾಜಿಗಳು ಮೊಳಕೆ ಒಡಿತಾ ಇದ್ರು ಹಾಗಾಗಿ ನಮ್ಗೆ ಕ್ರಮ ತೆಗೆದುಕೊಳ್ಳದೇ ಬೇರೆ ಆಯ್ಕೆ ಇರ್ಲಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ರಷ್ಯಾನ ಒಬ್ಬಂಟಿ ಮಾಡೋಕೆ ಆಗಲ್ಲ, ಬಾಹ್ಯಾಕಾಶದಲ್ಲಿ ನಾವೇ ನಂ 1 ಇದೀವಿ ಅಂತ ಹೇಳಿದ್ದಾರೆ. ಆದ್ರೆ ಯುಕ್ರೇನ್‌ ಮತ್ತು ಪಾಶ್ಚೀಮಾತ್ಯ ದೇಶಗಳು ಪುಟಿನ್‌ ಹೇಳಿಕೆಯನ್ನ ಅಲ್ಲಗಳೆದದ್ದು, ಪುಟಿನ್‌ ತನ್ನ ಕ್ರೌರ್ಯವನ್ನ ಕವರ್‌ ಅಪ್‌ ಮಾಡ್ಕೋತಾ ಇದ್ದಾರೆ ಅಂತ ಹೇಳಿವೆ.

-masthmagaa.com

Contact Us for Advertisement

Leave a Reply