ಮತ್ತೊಂದು ಚೀತಾ ಇನ್ನಿಲ್ಲ: 5 ತಿಂಗಳಲ್ಲಿ 9 ಚೀತಾ ಗಾನ್‌

masthmagaa.com:

ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿರುವ ಚೀತಾಗಳ ಸರಣಿ ಸಾವು ಮುಂದುವರೆದಿದೆ. ಇದೀಗ ಮತ್ತೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನದಲ್ಲಿ ಇಡಲಾಗಿರುವ ಧಾತ್ರಿ ಹೆಸರಿನ ಹೆಣ್ಣು ಚೀತಾ ಮೃತಪಟ್ಟಿದೆ. ಈ ಮೂಲಕ ಕಳೆದ 5 ತಿಂಗಳಲ್ಲಿ ಸಾವನ್ನಪ್ಪಿದ 9ನೇ ಚೀತಾ ಇದಾಗಿದೆ. ಈ ಚೀತಾ ಸಾವಿಗೆ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚೋಕೆ ಪ್ರಯತ್ನಿಸಲಾಗುತ್ತಿದೆ ಅಂತ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಕೇಂದ್ರ ಸರ್ಕಾರ ಪ್ರಾಜೆಕ್ಟ್‌ ಚೀತಾ ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ 8 ಚೀತಾಗಳನ್ನು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಟ್ಟಿತ್ತು.

-masthmagaa.com

Contact Us for Advertisement

Leave a Reply