ಪ್ರತಿ 4 ಸೆಕೆಂಡಿಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದಾನೆ: NGOಗಳಿಂದ ಜಗತ್ತಿನ ನಾಯಕರಿಗೆ ಎಚ್ಚರಿಕೆ

masthmagaa.com:

ಪ್ರತಿ 4 ಸೆಕೆಂಡಿಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾಯುತ್ತಿದ್ದಾನೆ ಅಂತ 200ಕ್ಕೂ ಅಧಿಕ NGOಗಳು ಜಗತ್ತಿಗೆ ಎಚ್ಚರಿಕೆ ನೀಡಿವೆ. ಜಾಗತಿಕ ಹಸಿವಿನ ಬಿಕ್ಕಟ್ಟನ್ನ ಕೊನೆಗೊಳಿಸೋಕೆ ಅಂತಾರಾಷ್ಟ್ರೀಯ ಕ್ರಮವನ್ನ ತೆಗೆದುಕೊಳ್ಳುವಂತೆ ಒತ್ತಾಯಿಸಿವೆ. ಈ ನಿಟ್ಟಿನಲ್ಲಿ 75 ದೇಶಗಳಲ್ಲಿರೊ ಸಂಸ್ಥೆಗಳು ಓಪನ್‌ ಲೆಟರ್‌ಗೆ ಸೈನ್‌ ಹಾಕಿವೆ. ಇದ್ರಲ್ಲಿ ಜಗತ್ತಿನಲ್ಲಿ 34.5 ಕೋಟಿ ಜನರು ಈಗಾಗಲೇ ತೀವ್ರ ಹಸಿವನ್ನ ಎದುರಿಸ್ತಿದಾರೆ. ಈ ಸಂಖ್ಯೆ 2019ಕ್ಕೆ ಹೋಲಿಸಿದ್ರೆ ಎರಡು ಪಟ್ಟಿಗಿಂತಾನೂ ಜಾಸ್ತಿಯಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿವೆ.

-masthmagaa.com

Contact Us for Advertisement

Leave a Reply