ಗಣರಾಜ್ಯೋತ್ಸವ ಹಿನ್ನಲೆ ಭಾರತ ಗಡಿಯಲ್ಲಿ ʻಆಪರೇಷನ್‌ ಸರ್ದ್‌ ಹವಾʼ!

masthmagaa.com:

ಗಣರಾಜ್ಯೋತ್ಸವ ದಿನ ಹತ್ರವಾಗ್ತಿದ್ದಂಗೆ ಇದೀಗ ಭಾರತ-ಪಾಕ್‌ ಗಡಿಯಲ್ಲಿ 15 ದಿನಗಳ ಸ್ಪೆಷಲ್‌ ಕಾರ್ಯಾಚರಣೆ ನಡೆಸಲಾಗ್ತಿದೆ. ಇದಕ್ಕೆ ʻಆಪರೇಷನ್‌ ಸರ್ದ್‌ ಹವಾʼ ಅಂತ ಹೆಸರಿಡಲಾಗಿದೆ. ಇದರ ಭಾಗವಾಗಿ ಜಮ್ಮು & ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ ಬಾರ್ಡರ್‌ಗಳಲ್ಲಿ ಕೇಂದ್ರ ಭದ್ರತಾ ಪಡೆಗಳು ಅಲರ್ಟ್‌ ಘೋಷಿಸಿವೆ. ರಿಪಬ್ಲಿಕ್‌ ಡೇ ಟೈಮಲ್ಲಿ ಯಾವ್ದೇ ರೀತಿ ಉಗ್ರದಾಳಿ ಆಗದಿರ್ಲಿ ಅಂತ ಪ್ರತಿ ವರ್ಷ ಈ ಕಾರ್ಯಾಚರಣೆ ನಡೆಸಲಾಗುತ್ತೆ. ಆದ್ರೆ ಈ ಹಿಂದೆ ರಿಪಬ್ಲಿಕ್‌ ಡೇ ಮುಂಚಿತವಾಗಿ 10 ದಿನಗಳ ಕಾಲ ಈ ಸ್ಪೆಷಲ್‌ ಅಲರ್ಟ್‌ ನೀಡಲಾಗ್ತಿತ್ತು. ಆದ್ರೆ ಈ ಬಾರಿ ರಾಮಮಂದಿರ ಕಾರ್ಯಕ್ರಮ ಇರೋದ್ರಿಂದ ಸ್ಪೆಷಲ್ಲಾಗಿ 15 ದಿನಗಳ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಇಂಟೆಲಿಜೆನ್ಸ್‌ ರಿಪೋರ್ಟ್‌ ಪ್ರಕಾರ, ಪಾಕಿಸ್ತಾನದಿಂದ ಸ್ಮಗ್ಲರ್‌ಗಳು ಹಾಗೂ ಡ್ರೋನ್ಸ್‌ ಬಳಸಿ ಭಾರತಕ್ಕೆ ಶಸ್ತ್ರಾಸ್ತ್ರ ಡೆಲಿವರ್‌ ಮಾಡೋಕೆ ಪ್ಲಾನ್‌ ಮಾಡಿದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವ ಟೈಮಲ್ಲಿ ಅಶಾಂತಿ ಉಂಟು ಮಾಡೋಕೆ ಪಂಜಾಬ್‌ ಹಾಗೂ ರಾಜಸ್ಥಾನದಲ್ಲಿರೋ ಖಲಿಸ್ತಾನಿ ಬೆಂಬಲಿಗರಿಗೆ ಆಯುಧ ತಲುಪಿಸೋಕೆ ಈ ಸ್ಕೆಚ್‌ ಹಾಕಲಾಗಿದೆ ಅಂತ ತಿಳಿದು ಬಂದಿದೆ. ಇದಕ್ಕೆ ಪುಷ್ಠಿ ಕೊಡೋ ತರ ಖಲಿಸ್ತಾನಿ ಉಗ್ರ ಪನ್ನುನ್‌ ಕೂಡ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಈ ನಡುವೆ ಮತ್ತೊಂದು ವೀಡಿಯೋ ರಿಲೀಸ್‌ ಮಾಡಿ, ಮೋದಿಯವ್ರೇ ಧಮ್ಮಿದ್ರೆ ಗಣರಾಜ್ಯೋತ್ಸವದಲ್ಲಿ ಸೆಕ್ಯೂರಿಟಿ ಇಲ್ಲದೆ ಭಾಗಿಯಾಗಿ ನೋಡಣ ಅಂತ ಚಾಲೆಂಜ್‌ ಮಾಡಿದ್ದಾನೆ. ಅಲ್ಲದೆ, ʻನೀವು ಹಾಗೆ ಬಂದು ನೋಡಿ, ನಮ್ಮ ನಿಜ್ಜರ್‌ ಹತ್ಯೆಗೆ ಸೇಡು ತೀರಿಸಿಕೊಳ್ತೇವೆ. ನಮ್ಮ ಸಿಖ್‌ ಫಾರ್‌ ಜಸ್ಟೀಸ್‌ ಕಾರ್ಯಕರ್ತರು ದೆಹಲಿಯಲ್ಲಿ ಖಾಲಿಸ್ತಾನಿ ಭಾವುಟ ಹಾರಿಸ್ತಾರೆʼ ಅಂತೆಲ್ಲಾ ನಾಲಿಗೆ ಹರಿಬಿಟ್ಟಿದ್ದಾನೆ. ಸೋ ಇಷ್ಟೆಲ್ಲಾ ಥ್ರೆಟ್ಸ್‌ ಇರೋದ್ರಿಂದ ಇದೀಗ ಇಂಡೋ-ಪಾಕ್‌ ಬಾರ್ಡರ್‌ನ ಅಟ್ಟಾರಿ ಗಡಿ, ಕರ್ತಾರ್‌ಪುರ್ ಕಾರಿಡಾರ್‌, ಹುಸ್ಸೇನಿವಾಲಾ ಗಡಿಯಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಇನ್ನು ಜಮ್ಮು ಮತ್ತು ಪಂಜಾಬ್‌ನ ನದಿ ಪ್ರದೇಶಗಳಲ್ಲಿ ಗಡಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದಾರೆ. ಜೊತೆಗೆ ಯಾವ್ದೇ ರೀತಿ ಭದ್ರತಾ ಉಲ್ಲಂಘನೆ ಮತ್ತು ಉಗ್ರದಾಳಿಯನ್ನ ತಡೆಯೋಕೆ ಎಲೆಕ್ಟ್ರಾನಿಕ್‌ ಉಪಕರಣಗಳ ಕಣ್ಗಾವಲನ್ನ ಹೆಚ್ಚಿಸಲಾಗಿದೆ.

-masthmagaa.com

Contact Us for Advertisement

Leave a Reply