ಭಾರತದಲ್ಲಿ ಇಸ್ಲಾಂ ಯಾವಾಗ್ಲೂ ಸುರಕ್ಷಿತವಾಗಿದೆ: RSS ಮುಖ್ಯಸ್ಥ

masthmagaa.com:

ದೇಶದ ಗಡಿಯಲ್ಲಿರುವ ಶತ್ರುಗಳಿಗೆ ನಮ್ಮ ಶಕ್ತಿ ತೋರಿಸುವ ಬದಲು ನಾವು ನಮ್ಮ ನಡುವೆಯೇ ಹೊಡೆದಾಡಿಕೊಳ್ಳುತ್ತಿದ್ದೇವೆ ಅಂತ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ನಾಗ್ಪುರದಲ್ಲಿ ʻಸಂಘ ಶಿಕ್ಷ ವರ್ಗʼದ ಸಮಾರಂಭದಲ್ಲಿ ಮಾತಾಡಿದ ಭಾಗವತ್‌, ಭಾರತದ ಪ್ರತಿಯೊಬ್ಬ ನಾಗರಿಕರು ದೇಶದ ಏಕತೆ ಹಾಗೂ ಸಮಗ್ರತೆಯನ್ನ ಹೆಚ್ಚಿಸಲು ಪ್ರಯತ್ನಿಸಬೇಕು ಅಂತ ಕರೆ ನೀಡಿದ್ದಾರೆ. ಜೊತೆಗೆ ಕೆಲವರ ಅಹಂಕಾರ ಹಿಂದೂ-ಮುಸ್ಲಿಂ ಮುದಾಯಗಳ ಏಕತೆಯನ್ನ ತಡೆಯುತ್ತಿದೆ. ಭಾರತದಲ್ಲಿ ಇಸ್ಲಾಂ ಯಾವಾಗ್ಲೂ ಸುರಕ್ಷಿತವಾಗಿದೆ. ಪ್ರತಿಯೊಬ್ಬರೂ ಪ್ರತ್ಯೇಕತೆಗೆ, ಪ್ರತ್ಯೇಕ ಗುರುತಗಳಿಗೆ ಹೆಚ್ಚಿನ ಒತ್ತು ನೀಡುವ ಬದಲು ರಾಷ್ಟ್ರೀಯ ಗುರುತನ್ನು ಏಕೀಕರಣವಾಗಿ ಸ್ವೀಕರಿಸಬೇಕು ಅಂತ ಹೇಳಿದ್ದಾರೆ. ನಾವೆಲ್ಲರೂ ಒಂದೇ ಅನ್ನೊದನ್ನ ಮರೆತಿರೋದ್ರಿಂದ ಹಿಂಸಾಚಾರದ ಘಟನೆಗಳು ನಡೆದಿವೆ. ಇದು ನಮ್ಮ ಮಾತೃಭೂಮಿ, ನಮ್ಮ ಪೂಜಾ ವಿಧಾನಗಳು ವಿಭಿನ್ನವಾಗಿವೆ, ಕೆಲವರು ಹೊರಗಿನಿಂದ ಬಂದವರು ದೇಶದಲ್ಲಿದ್ರು. ಈಗ ಅವರೆಲ್ಲರೂ ಹೊರಹೋಗಿದ್ದಾರೆ. ಈಗಿರೋರು ಎಲ್ಲ ನಮ್ಮವರೇ ಎಂದಿದ್ದಾರೆ.

-masthmagaa.com

Contact Us for Advertisement

Leave a Reply