ಚೀನಾ: ಭಾರಿ ಬಂದೋಬಸ್ತ್‌ನಲ್ಲಿ ಕಮ್ಯುನಿಸ್ಟ್‌ ಪಕ್ಷದ ಸಭೆ, ಪ್ರತಿ 100 ಅಡಿ ಅಂತರದಲ್ಲಿ ಭದ್ರತಾ ಪಡೆ

masthmagaa.com:

ಮಾವೋ ನಂತ್ರ ಷಿಜಿನ್‌ ಪಿಂಗ್‌ ಚೀನಾದ ಅತ್ಯಂತ ಪವರ್‌ಫುಲ್‌ ನಾಯಕ ಅನ್ನೋದು ಇನ್ನೇನು ಅಧಿಕೃತವಾಗಲಿದೆ. ಮೂರನೇ ಬಾರಿಗೆ ಚೀನಾದ ಅಧ್ಯಕ್ಷ ಆಗುವ ಮೂಲಕ ಜಿನ್‌ಪಿಂಗ್‌ ಇದನ್ನ ಸಾಕಾರಗೊಳಿಸಲಿದ್ದಾರೆ. ಭಾನುವಾರದಿಂದ ಶುರುವಾಗಿರೋ ಚೀನಾದ ಕಮ್ಯುನಿಸ್ಟ್‌ ಪಕ್ಷದ 20ನೇ ಪಂಚವಾರ್ಷಿಕ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗಲಿದೆ. ಹೀಗಾಗಿ ಚೀನಾ ಸರ್ಕಾರ ಇದಕ್ಕೆ ಕೂದಲೆಳೆಯಷ್ಟು ಅಪಚಾರ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನ ಅನುಸರಿಸ್ತಿದೆ. ಅದ್ರಲ್ಲೂ ಇತ್ತೀಚೆಗೆ ಚೀನಾದಲ್ಲಿ ಜಿನ್‌ಪಿಂಗ್‌ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಯ ಕಿಡಿ ಎದ್ದಿರೋದ್ರಿಂದ ಸೆಕ್ಯುರಿಟಿ ಸ್ವಲ್ಪ ಜಾಸ್ತಿನೇ ಟೈಟಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಬೀಜಿಂಗ್‌ನ ಬೀದಿಗಳಲ್ಲಿ ನೂರು ಅಡಿಗೆ ಒಬ್ಬ ಭದ್ರತಾಪಡೆಯವ್ರೋ, ಜಿನ್‌ಪಿಂಗ್‌ನ ಸ್ವಯಂಸೇವಕರೋ ನಿಂತು ಕಾವಲು ಕಾಯ್ತಿದ್ದಾರೆ. ಅದ್ರಲ್ಲೂ ಈ ಸಭೆ ವೇಳೆ ಕಠಿಣ ಕೋವಿಡ್‌ ನಿಯಮಗಳನ್ನ ಫಾಲೋ ಮಾಡಲಾಗಿದೆ. ಹೇಗೆ ಅಂದ್ರೆ, ಯಾರಾದ್ರೂ ಒಂದು ಕೋವಿಡ್‌ ಕೇಸ್‌ ಇರೊ ಸಿಟಿಯಿಂದ ಬಂದಿದ್ರು ಕೂಡ ಅವ್ರನ್ನ ಬೀಜಿಂಗ್‌ ಪ್ರವೇಶಿಸದಂತೆ ತಡೆಯಲಾಗಿದೆ. ಇದ್ರಿಂದ ಅನೇಕರಿಗೆ ತುಂಬಾ ತೊಂದರೆ ಉಂಟಾಗಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ 100 ದಿನಗಳಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡ್ತಿದ್ದ 14 ಲಕ್ಷ ಜನರನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದ್‌ ಕಡೆ ಪ್ರತಿಭಟನಾ ಭಾಗವಾಗಿ ಸರ್ಕಾರದ ವಿರುದ್ದ ಪೋಸ್ಟ್‌ ಹಾಕಿದ್ದಕ್ಕೆ ಸರ್ಕಾರ ಅನೇಕರ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳನ್ನ ಬ್ಯಾನ್‌ ಮಾಡಿತ್ತು. ಇದೀಗ ಅವರೆಲ್ಲ ತಮ್ಮ ಅಕೌಂಟ್‌ಗಳನ್ನ ಮತ್ತೆ ರಿಸ್ಟೋರ್‌ ಮಾಡಿ ಅಂತ ಬೇಡಿಕೊಳ್ಳುತ್ತಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply