ಬಳಸದೇ ಹಾಗೇ ಉಳಿದ ಕೋಟಿ ಕೋಟಿ ಲಸಿಕೆ ಕೇಂದ್ರ ಗರಂ!

masthmagaa.com:

ಬಳಕೆ ಮಾಡ್ದಿರೊ ಕೋಟಿಗಟ್ಟಲೇ ಕೋವಿಡ್‌ ಲಸಿಕೆ ಡೋಸ್‌ಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಒಟ್ಟು 192.27 ಕೋಟಿ ಲಸಿಕೆ ಡೋಸ್‌ಗಳನ್ನ ಭಾರತ ಸರ್ಕಾರ ಮತ್ತು ನೇರ ರಾಜ್ಯ ಸಂಗ್ರಹಣಾ ವರ್ಗದ ಮೂಲಕ ಉಚಿತವಾಗಿ ಪೂರೈಸಲಾಗಿತ್ತು. ಇದ್ರಲ್ಲಿ ಇನ್ನು 20.16 ಕೋಟಿಗಿಂತ ಅಧಿಕ ಲಸಿಕೆಗಳು ಬಳಸದೇ ಹಾಗೆ ಉಳಿದಿವೆ ಅಂತ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply