2022ರಲ್ಲಿ ಮಿಲಿಯನೇರ್‌ ಪಟ್ಟ ಕಳೆದುಕೊಂಡ 35 ಲಕ್ಷ ಜನ!

masthmagaa.com:

ಕಳೆದ ವರ್ಷ 35 ಲಕ್ಷಕ್ಕೂ ಅಧಿಕ ಜನ ತಮ್ಮ ಮಿಲಿಯನೇರ್‌ ಪಟ್ಟವನ್ನ ಕಳೆದುಕೊಂಡಿದ್ದಾರೆ ಅಂತ ವರದಿಯೊಂದ್ರಿಂದ ತಿಳಿದು ಬಂದಿದೆ. ಇದು 2008ರಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟ ಸಮಯದಿಂದ ಇಲ್ಲಿವರೆಗಿನ ಅತಿದೊಡ್ಡ ಇಳಿಕೆಯಾಗಿದೆ ಅಂತ UBS ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. 2021ರಲ್ಲಿ 6.29 ಕೋಟಿ ಮಿಲಿಯನೇರ್‌ಗಳಿದ್ರು. ಅವರ ಸಂಖ್ಯೆ 2022ರ ಅಂತ್ಯಕ್ಕೆ 5.9 ಕೋಟಿಗೆ ಇಳಿಕೆಯಾಗಿದೆ. ಜಾಗತ್ತಿನಾದ್ಯಂತ ತಲೆ ಎತ್ತಿರೊ ಹಣದುಬ್ಬರ ಹಾಗೂ ವಿಶ್ವಾದ್ಯಂತ ಅನೇಕ ಕರೆನ್ಸಿಗಳ ಮೌಲ್ಯ ಇಳಿಕೆಯಾಗಿರೋದು ಇದಕ್ಕೆ ಪ್ರಮುಖ ಕಾರಣ ಅಂತ ವರದಿಯನ್ನ ಉಲ್ಲೇಖಿಸಿ ಸ್ವಿಸ್‌ ಬ್ಯಾಂಕ್‌ ಹೇಳಿದೆ. ಅಮೆರಿಕದಲ್ಲಿ 18 ಲಕ್ಷ ಜನ ತಮ್ಮ ಮಿಲಿಯನೇರ್‌ ಪಟ್ಟವನ್ನ ಕಳೆದುಕೊಂಡು ಮೊದಲ ಸ್ಥಾನದಲ್ಲಿದ್ರೆ, ಚೀನಾ ಎರಡನೇ ಸ್ಥಾನದಲ್ಲಿದೆ. ಯುಕೆ ಹಾಗೂ ಜಪಾನ್ ನಂತರದ ಸ್ಥಾನದಲ್ಲಿವೆ. ಇದೇ ವೇಳೆ ಕೆಲ ದೇಶಗಳು ಇದರ ವಿರುದ್ಧವಾಗಿ ಸಂಪತ್ತಿನಲ್ಲಿ ಗಳಿಕೆಯನ್ನ ಕಂಡಿವೆ ಅಂತ ವರದಿಯಲ್ಲಿ ಹೇಳಲಾಗಿದೆ. ಅದ್ರಲ್ಲಿ ಭಾರತ, ರಷ್ಯಾ, ಮೆಕ್ಸಿಕೊ ಹಾಗೂ ಬ್ರೆಜಿಲ್‌ ದೇಶಗಳಿವೆ. ಇದು ಭಾರತಕ್ಕೆ ಮತ್ತೊಂದು ಒಳ್ಳೆಯ ಸುದ್ದಿಯಾಗಿದೆ.

-masthmagaa.com

Contact Us for Advertisement

Leave a Reply