ಸುಡಾನ್‌ ಸೇನಾ ಸಂಘರ್ಷದಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆ!

masthmagaa.com:

ಸುಡಾನ್‌ನಲ್ಲಿ ನಡಿತಿರುವ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಯುದ್ಧದಲ್ಲಿ ಮೃತಪಟ್ಟಿರೊ ಸಂಖ್ಯೆ 400ರ ಗಡಿ ದಾಟಿದೆ ಅಂತ WHO ಹೇಳಿದೆ. ದಿನದಿಂದ ದಿನಕ್ಕೆ ತೀವ್ರಗೊಳ್ತಿರುವ ಸಂಘರ್ಷದಲ್ಲಿ 413 ಜನ ಮೃತಪಟ್ಟು, 3 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಅಂತ WHO ವಕ್ತಾರೆ ಮಾರ್ಗರೇಟ್‌ ಹ್ಯಾರಿಸ್‌ ಹೇಳಿದ್ದಾರೆ. ಇದೇ ವೇಳೆ ಆಸ್ಪತ್ರೆಗಳ ಮೇಲೆ 11 ಬಾರಿ ದಾಳಿ ಮಾಡಲಾಗಿದೆ. ಇದ್ರಿಂದ ಸುಡಾನ್‌ ವೈದ್ಯಕೀಯ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಯುದ್ಧದಲ್ಲಿ ಗಾಯಗೊಂಡವ್ರು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗ್ತಿದೆ. ಅಷ್ಟೆ ಅಲ್ದೆ ಈ ಭೀಕರ ದಾಳಿ ಪ್ರತಿದಾಳಿಯಿಂದ ಮಕ್ಕಳ ಸಾವಿನ ಸಂಖ್ಯೆ ಕೂಡ ಏರಿಕೆಯಾಗ್ತಿದೆ ಅಂತ ಹ್ಯಾರಿಸ್‌ ತಿಳಿಸಿದ್ದಾರೆ. ಇತ್ತ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರನ್ನ ಕರೆತರಲು ಎರಡು ಏರ್‌ಫೋರ್ಸ್‌ನ ವಿಮಾನಗಳು ಹಾಗೂ ನೇವಿಯ ʻಸುಮೇಧʼ ಹಡುಗು ಈಗಾಗಲೇ ಸುಡಾನ್‌ ತಲುಪಿವೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಇನ್ನೊಂದ್‌ ಕಡೆ ಜರ್ಮನಿ ನಾಗರಿಕರು ಹಾಗೂ ಇತರ ದೇಶದ ಜನರು ಸೇರಿದಂತೆ 101 ಮಂದಿಯನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ ಅಂತ ಜರ್ಮನಿ ಹೇಳಿದೆ.

-masthmagaa.com

Contact Us for Advertisement

Leave a Reply