ದೇಶದ ಗುಪ್ತಚರ ಇಲಾಖೆಯಲ್ಲಿ ಮುಸ್ಲಿಂರಿಗೆ ಅವಕಾಶ ನೀಡ್ತಿಲ್ಲ ಅಂತ ಆರೋಪಿಸಿದ ಓವೈಸಿ!

masthmagaa.com:

ದೇಶದ ಗುಪ್ತಚರ ಇಲಾಖೆಯಲ್ಲಿ ಹಾಗು ಉನ್ನತ ಹುದ್ದೆಗಳಲ್ಲಿ ಮುಸ್ಲಿಂರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಸ್ಲಿಂ IPS ಅಧಿಕಾರಿಗಳನ್ನ ಸ್ಪೈ ಏಜೆನ್ಸಿಗಳಿಂದ ನಿಧಾನವಾಗಿ ತೆಗೆದು ಹಾಕಲಾಗ್ತಿದೆ ಅಂತ AIMIM ಮುಖ್ಯಸ್ಥ ಆಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ. ದಶಕಗಳಲ್ಲಿ ಇದೇ ಮೊದಲ ಬಾರಿಗೆ ಗುಪ್ತಚರ ಇಲಾಖೆಯಲ್ಲಿ ಯಾವುದೇ ಹಿರಿಯ ಮುಸ್ಲಿಂ ಅಧಿಕಾರಿಯಿಲ್ಲ. ಯಾವಗಲೂ ಮುಸ್ಲಿಂರ ನಿಷ್ಠೆಯ ಬಗ್ಗೆ ಅನುಮಾನ ಪಡುವ ಬಿಜೆಪಿ ಮುಸ್ಲಿಂರನ್ನ ಯಾವತ್ತೂ ಸಮಾನ ನಾಗರಿಕರು ಅಂತ ಪರಿಗಣಿಸೋದಿಲ್ಲ ಅಂತ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕವಿ ಹಾಗು ಮಾಜಿ ಆಪ್‌ ಸದಸ್ಯ ಕುಮಾರ್‌ ವಿಶ್ವಾಸ್‌ ಅವ್ರು, ಓವೈಸಿಯವರೇ ಧರ್ಮಕ್ಕೆ ಬದಲಾಗಿ ದೇಶವನ್ನ ಹಾಗೂ ಕುರಾನ್‌ ಬದ್ಲಾಗಿ ಸಂವಿಧಾನವನ್ನ ಆಯ್ಕೆ ಮಾಡಿಕೊಳ್ತೀವಿ ಎಂದು ಪ್ರತಿಜ್ಞೆ ಮಾಡಿ ಅಂತ ಕೇಳಿದ್ದಾರೆ. ಇದಕ್ಕೆ ಕುಮಾರ್‌ ಹೆಸರು ಬಳಸದೇ, ಇತ್ತೀಚೆಗೆ ಹೆಚ್ಚಾಗ್ತಿರೋ ಹನಿಟ್ರ್ಯಾಪ್‌ಗಳನ್ನ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಓವೈಸಿ, ಮುಸ್ಲಿಂರಿಗೆ ದೇಶನಾ ಅಥ್ವಾ ಧರ್ಮನಾ ಅಂತ ಕೇಳಲಾಗ್ತಿದೆ. ಆದ್ರೆ ಅದೆಷ್ಟು ಜನ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನ ಮಾರಾಟ ಮಾಡುವಾಗ ಸಿಕ್ಕಿದ್ದಾರೋ ಗೊತ್ತಿಲ್ಲ. ISI ಮಹಿಳೆಯರ ರೀತಿ ಫೇಕ್‌ ಅಕೌಂಟ್‌ಗಳನ್ನ ಕ್ರಿಯೇಟ್‌ ಮಾಡಿ ಇವ್ರನ್ನ ಟ್ರ್ಯಾಪ್‌ ಮಾಡ್ತಿದೆ. ಧರ್ಮವನ್ನ ಪಕ್ಕಕಿಡಿ, ಆ ರೀತಿ ಹನಿಟ್ರ್ಯಾಪ್‌ಗೆ ಒಳಾಗ್ತಿರೋರನ್ನ ದೇಶ ಅಥ್ವಾ ಕಾಮದ ನಡುವೆ ಯಾವುದನ್ನ ಚೂಸ್‌ ಮಾಡ್ತೀರಿ ಅಂತ ಯಾರಾದ್ರೂ ಕೇಳಿದ್ದಾರ ಅಂತ ವಾಗ್ದಾಳಿ ನಡೆಸಿದ್ದಾರೆ.

-masthmagaa.com
Contact Us for Advertisement

Leave a Reply