ಪದ್ಮಶ್ರೀ ವಾಪಾಸ್‌: ಪಿಎಂಗೆ ಲೆಟರ್‌ ಬರೆದ ಭಜರಂಗ್‌ ಪುನಿಯಾ!

masthmagaa.com:

ಭಾರತೀಯ ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷನಾಗಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ನ ಆಪ್ತ ಸಂಜಯ್‌ ಸಿಂಗ್‌ ಆಯ್ಕೆಯಾಗಿದ್ರು. ಇದ್ರ ಬೆನ್ನಲ್ಲೇ ಒಲಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಕುಸ್ತಿಯಿಂದ ನಿವೃತ್ತಿ ಪಡೆಯೋದಾಗಿ ಘೋಷಿಸಿದ್ರು. ಇದೀಗ ಕುಸ್ತಿ ಪಟು ಭಜರಂಗ್‌ ಪುನಿಯಾ ಅವ್ರು ತಮಗೆ ಸಿಕ್ಕ ಪದ್ಮಶ್ರೀ ಅವಾರ್ಡ್‌ನ್ನ ಪ್ರಧಾನಿ ಮೋದಿಯವ್ರ ಮನೆ ಮುಂದೆ ಇಟ್ಟು ಹೋಗಿದ್ದಾರೆ. ಅಲ್ಲದೇ ಪಿಎಂ ಮೋದಿಗೆ ಲೆಟರ್‌ ಒಂದನ್ನ ಬರೆದಿದ್ದಾರೆ. ತಮ್ಮ `X’ ಖಾತೆಯಲ್ಲಿ ಪತ್ರವನ್ನ ಶೇರ್‌ ಮಾಡಿರೋ ಅವ್ರು, ಇಡೀ ಕುಸ್ತಿಪಟುಗಳ ಪ್ರತಿಭಟನೆಯನ್ನ ಉಲ್ಲೇಖಿಸಿದ್ದಾರೆ. ನಾವು ಅಷ್ಟೆಲ್ಲಾ ಪ್ರತಿಭಟನೆ ಮಾಡಿದ್ವಿ, ಗಂಗೆಯಲ್ಲಿ ನಮ್ಮ ಪದಕಗಳನ್ನ ಬಿಡೋಕೆ ಹೋಗಿದ್ವಿ, ಆವಾಗ ನಮ್ಮ ಕೋಚ್‌ ಒಬ್ರು ತಡೆದಿದ್ರು. ಅಲ್ಲದೇ ನಿಮ್ಮ ಹಿರಿಯ ಸಚಿವರೊಬ್ರು ಕಾಲ್‌ ಮಾಡಿ ನಿಮಗೆ ನ್ಯಾಯ ಕೊಡಿಸ್ತೀವಿ ಬನ್ನಿ ಅಂದಿದ್ರು. ನಂತ್ರ ಗೃಹಸಚಿವರು ಕೂಡ ಮೀಟ್‌ ಮಾಡಿ ಬ್ರಿಜ್‌ ಭೂಷಣ್‌ ಸಿಂಗ್‌ರನ್ನ ಕುಸ್ತಿ ಫೆಡರೇಷನ್‌ನಿಂದ ಆಚೆ ಇಡ್ತೀವಿ, ಅವ್ರ ಫ್ಯಾಮಿಲಿ ಹಾಗು ಅವ್ರ ಕಡೆಯವ್ರು ಯಾರೂ ಕುಸ್ತಿಯಲ್ಲಿ ಇರದಂತೆ ನೋಡ್ಕೋತಿವಿ ಅಂತ ಭರವಸೆ ನೀಡಿದ್ರು. ಆದ್ರೆ ಈಗ ಅದ್ಯಾವುದೂ ಆಗಿಲ್ಲ. ಆತ ದಬ್‌ದಬಾ ಥಾ ದಬ್‌ದಬಾ ರಹೇಗಾ ಅಂದ್ರೆ ನನ್ನ ಪ್ರಾಬಲ್ಯ ಇತ್ತು, ಈಗ ಮುಂದುವರೆಯುತ್ತೆ ಅಂತ ಹೇಳಿಕೆ ಕೊಟ್ಟಿದ್ದಾನೆ. ಮಹಿಳಾ ಕುಸ್ತಿಪಟು ಒಬ್ಬಳು ತನಗೆ ರಕ್ಷಣೆ ಇಲ್ಲದೇ ಕುಸ್ತಿಯನ್ನ ಬಿಡುವಂತೆ ಆಗಿದೆ. ಇದು ನನ್ನ ಮನಸ್ಸಿಗೆ ಘಾಸಿ ಮಾಡಿದ್ದು, ನನಗೆ ನೀಡಿದ ಗೌರವವನ್ನ ವಾಪಸ್‌ ನೀಡುವಂತೆ ಪ್ರೇರೇಪಿಸಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply