ಪಾಕ್‌ನಲ್ಲಿ ವೀಕ್‌ ಆಫ್‌ಗೆ ಬ್ರೇಕ್‌, ಇನ್ಮುಂದೆ 10 ಗಂಟೆ ಕೆಲಸ!

masthmagaa.com:

ಕ್ರೀಸಿಗೆ ಇಳಿತಿದ್ದಂತೆ ಭರ್ಜರಿ ಬ್ಯಾಟಿಂಗ್‌ ಶುರು ಮಾಡ್ಕೊಂಡಿರೋ ಪಾಕ್‌ನ ನೂತನ ಪ್ರಧಾನಿ ಶಹಭಾಜ್‌ ಶರೀಫ್‌, ವಾರದಲ್ಲಿ 5 ದಿನದ ಬದ್ಲಾಗಿ 6 ದಿನ ವರ್ಕಿಂಗ್‌ ಡೇ ಮಾಡಿದ್ದಾರೆ. ಈ ಬಗ್ಗೆ ಇವತ್ತು ಆದೇಶ ಮಾಡಿರೋ ಅವ್ರು, ಇನ್ಮೇಲೆ ವಾರದಲ್ಲಿ 2 ದಿನ ವೀಕ್‌ ಆಫ್‌ ಇರಲ್ಲ ಕೇವಲ ಒಂದು ದಿನ ಮಾತ್ರ ವೀಕ್‌ ಆಫ್‌ ಇರುತ್ತೆ ಅಂತಾ ಹೇಳಿದ್ದಾರೆ. ಜೊತೆಗೆ ಸರ್ಕಾರಿ ಕಚೇರಿಗಳ ಕರ್ತವ್ಯದ ಅವಧಿಯನ್ನು ಕೂಡ 8 ಗಂಟೆಗಳಿಗೆ ಬದ್ಲಾಗಿ 10 ಗಂಟೆ ಮಾಡಲಾಗಿದೆ ಅಂತ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ತಾ ಇದ್ದು, ಹೀಗೆ ಆದ್ರೆ ಸರ್ಕಾರಕ್ಕೆ ತುಂಬಾ ತೊಂದ್ರೆ ಆಗುತ್ತೆ ಅಂತ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ರು. ಆ ಬೆನ್ನಲ್ಲೇ ಪಾಕ್‌ನ ನೂತನ ಸರ್ಕಾರ ಕರ್ತವ್ಯದ ಅವಧಿಯನ್ನ ಹೆಚ್ಚು ಮಾಡೋ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಪಾಕಿಸ್ತಾನದ ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ಅಂದ್ರೆ ಶನಿವಾರ ಮತ್ತು ಭಾನುವಾರ ʼವೀಕ್‌ ಆಫ್‌ʼ ಇರ್ತಿತ್ತು. ಆದ್ರೆ ಪ್ರಾಂತೀಯ ಸರ್ಕಾರಿ ಅಂದ್ರೆ ಪಾಕ್‌ನ ರಾಜ್ಯ ಸರ್ಕಾರ ಕಚೇರಿಗಳಲ್ಲಿ ಭಾನುವಾರ ಮಾತ್ರ ವೀಕ್‌ ಆಫ್‌ ಇದ್ದು, ಶುಕ್ರವಾರ ಅರ್ಧ ದಿನ ರಜೆ ಇರ್ತಿತ್ತು.

-masthmagaa.com

Contact Us for Advertisement

Leave a Reply