ಪಾಕ್‌ನ ಬಲೂಚಿಸ್ತಾನ್‌ನಲ್ಲಿ ಗುಂಡಿನ ದಾಳಿ! 9 ಮಂದಿ ಸಾವು!

masthmagaa.com:

ಇತ್ತೀಚೆಗೆ ಪಾಕ್‌ ಮತ್ತು ಅಫ್ಘಾನ್‌ ಗಡಿಭಾಗದಲ್ಲಿರೋ ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಬಸ್‌ನಲ್ಲಿ ಸಾಗ್ತಿದ್ದ ಒಟ್ಟು 9 ಮಂದಿ ವ್ಯಕ್ತಿಗಳನ್ನ ಅಪಹರಿಸಿ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ರು. ಈಗ ಈ ದಾಳಿ ಹೊಣೆಯನ್ನ ʻಬಲೂಚ್‌ ಲಿಬರೇಷನ್‌ ಆರ್ಮಿʼ ಹೊತ್ಕೊಂಡಿದೆ. ವರದಿಯೊಂದ್ರ ಪ್ರಕಾರ ಹತ್ಯೆಯಾದವ್ರು, ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರು ಅಂತೇಳಲಾಗ್ತಿದೆ. ಆದ್ರೆ ಪಾಕ್‌ ಅಧಿಕಾರಿಗಳು ಮಾತ್ರ…ಈ ವರದಿಯನ್ನ ನಿರಾಕರಿಸಿ, ಇರಾನ್‌ ಕಡೆ ಸಾಗ್ತಿದ್ದ ಕಾರ್ಮಿಕರು ಹತ್ಯೆಯಾಗಿರೋದು ಅಂದಿದ್ದಾರೆ. ಸೋ…ಹತ್ಯೆಯಾಗಿರೋರು ಯಾರು ಅನ್ನೋದ್ರ ಬಗ್ಗೆ ಸದ್ಯ ಕ್ಲಾರಿಟಿ ಸಿಕ್ಕಿಲ್ಲ. ಇನ್ನು ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಈ ಹತ್ಯೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply